Monday, December 23, 2024

ಕೌಂಟ್ ಡೌನ್ ಶುರು.. 3 ವರ್ಷದ ಬಳಿಕ ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್

ಬೆಂಗಳೂರು : ದಿ ವೆಯ್ಟ್ ಈಸ್ ಓವರ್.. ಮೂರು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಆರ್‌ಸಿಬಿ ಪ್ಯಾನ್ಸ್ ಗೆ ಇಂದು ಹಬ್ಬ. ಮೂರು ವರ್ಷಗಳ ಬಳಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಉತ್ಸಾಹ ಮತ್ತು ಕಪ್ ಗೆಲ್ಲುವ ಕನಸಿನೊಂದಿಗೆ ಇಂದು ಐಪಿಎಲ್ ಆಟ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು ಹಾಕಿದೆ.

ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ವಿರುದ್ಧ ಆರ್‌ಸಿಬಿ ದಾಖಲೆ ಹೇಳಿಕೊಳ್ಳುವ ಹಾಗಿಲ್ಲ. ಆದರೆ, ತವರಿನಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳ ಬೆಂಬಲ ಸಿಗುತ್ತಿದೆ. ವಿರಾಟ್, ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಆಟದ ಮೇಲೆ ಎಲ್ಲರಿಗೂ ಕಣ್ಣಿದೆ.

ಆರ್‌ಸಿಬಿಗೆ ಗುಡ್ ನ್ಯೂಸ್

ಆರ್‌ಸಿಬಿ ಇಂದು ತನ್ನ ಮೊದಲ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮುಂಬೈ ವಿರುದ್ಧ ಆಡಲಿದೆ. ಗಾಯದ ಕಾರಣದಿಂದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಲಭ್ಯತೆ ಬಗ್ಗೆ ಸಂದೇಹವಿತ್ತು. ಆದರೆ ಮುಂಬೈ ವಿರುದ್ಧದ ಮೊದಲ ಪಂದ್ಯಕ್ಕೆ ಮ್ಯಾಕ್ಸಿ ಲಭ್ಯವಿರುವ ಬಗ್ಗೆ ವರದಿಯಾಗಿದೆ.

ಗಾಯದಿಂದ ಚೇತರಿಸಿಕೊಂಡಿರುವ ಆಸೀಸ್ ಆಲ್‌ರೌಂಡರ್ ಕಣಕ್ಕಿಳಿಯುವ ಬಗ್ಗೆ ಬಹುತೇಕ ಖಚಿತವಾಗಿದೆ. ಮ್ಯಾಕ್ಸ್‌ವೆಲ್ ಲಭ್ಯತೆ ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಬಲ ತಂದಿದೆ.

ಪಂದ್ಯ ಆರಂಭ : ಸಂಜೆ 7.30

ಸ್ಥಳ : ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಆರ್​ಸಿಬಿ ತಂಡ

ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲಿ, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ಮನೋಜ್ ಬಾಂಢಗೆ, ರಾಜನ್‌ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮಿಚೆಲ್ ಬ್ರೇಸ್‌ವೆಲ್.

ಮುಂಬೈ ಇಂಡಿಯನ್ಸ್ ತಂಡ

ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟಿಮ್ ಡೇವಿಡ್, ಡೇವಿಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟನ್ ಸ್ಟಬ್ಸ್, ವಿಷ್ಣು ವಿನೋದ್, ಕ್ಯಾಮೆರಾನ್ ಗ್ರೀನ್, ರಮಣದೀಪ್ ಸಿಂಗ್, ಶಮ್ಸ್ ಮುಲಾನಿ, ನೇಹಲ್ ವಡೇರಾ, ಹೃತಿಕ್ ಶೊಕೀನ್, ಅರ್ಷದ್ ಖಾನ್, ಡಾನ್ ಜೇನ್ಸನ್, ಪಿಯೂಷ್ ಚಾವ್ಲಾ, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೆಯ, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆನ್‌ಡ್ರಾಫ್, ಆಕಾಶ್ ಮದವಾಲ್.

RELATED ARTICLES

Related Articles

TRENDING ARTICLES