Wednesday, January 22, 2025

ಕನ್ನಡ ನಟಿಗೆ ‘ಬ್ಲೂ ಫಿಲ್ಮ್’ನಲ್ಲಿ ನಟಿಸ್ತೀರಾ ಎಂದ ಯೂಟ್ಯೂಬರ್ : ಮುಂದೇನಾಯ್ತು ನೋಡಿ?

ಬೆಂಗಳೂರು : ಇದೇ ಏಪ್ರಿಲ್ 7ರಂದು ಬಿಡುಗಡೆಯಾಗಲಿರುವ ‘ಪೆಂಟಗನ್’ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿರುವ ಕನ್ನಡ ನಟಿ ತನಿಷಾ ಕುಪ್ಪಂಡ ಯೂಟ್ಯೂಬ‌ರ್ ಮೇಲೆ ಸಿಟ್ಟಾಗಿದ್ದಾರೆ.

ಹೌದು, ಸಂದರ್ಶನದ ವೇಳೆ ಯೂಟ್ಯೂಬರ್ (ಆಂಕರ್), ನೀವು ‘ಬ್ಲೂ ಫಿಲ್ಮ್'(ನೀಲಿಚಿತ್ರ)ನಲ್ಲಿ  ನಟಿಸುವಿರಾ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಕೆರಳಿರುವ ನಟಿ ತನಿಷಾ ಕುಪ್ಪಂಡ ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಂಕರ್ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ತನಿಷಾ, ‘ಬೋಲ್ಡ್ ಆಗಿ ನಟಿಸಿದ್ದೇನೆ ಅಂದಮಾತ್ರಕ್ಕೆ ಈ ತರಹ ಪ್ರಶ್ನೆ ಕೇಳೋದಾ? ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಕೇಳುತ್ತಿರಾ? ನಿಮಗೆ ಕಾಮನ್‌ಸೆನ್ಸ್ ಇಲ್ವಾ’ ಎಂದು ಕೋಪಗೊಂಡಿದ್ದಾರೆ. ಅಲ್ಲದೆ, ಸಂದರ್ಶನ ಅರ್ಧಕ್ಕೆ ನಿಲ್ಲಿಸಿದ್ದಾರೆ.

ಕನ್ನಡ ಸೀರಿಯಲ್ ನಲ್ಲಿ ನಟನೆ

ನಟಿ ತನಿಷಾ ಕುಪ್ಪಂಡ ಕನ್ನಡದ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ, ‘ಪೆಂಟಗನ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಇದೇ 7ರಂದು ರಿಲೀಸ್ ಆಗಲಿದೆ.

 

ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌

ಇನ್ನೂ ನಟಿ ತನಿಷಾ ಕುಪ್ಪಂಡ ಪೆಂಟಗನ್ ಸಿನಿಮಾದಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಸೀನ್ ಗಳಲ್ಲಿ ಬ್ಯಾಕ್‌ಲೆಸ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಲಿಪ್‌ಲಾಕ್‌ ಮಾಡಿರುವ ದೃಶ್ಯವೂ ಇದೆ. ಇದೇ ಕಾರಣಕ್ಕೆ ಯೂಟ್ಯೂಬರ್ ಸಂದರ್ಶನದಲ್ಲಿ ನಟಿಗೆ ಈ ರೀತಿ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES