ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿ ಚುನವಣಾ ಕಾವು ಏರತೊಡಗಿದೆ. ನೀತಿ ಸಂಹಿತೆ ಜಾರಿಯಾಗಿದ್ದು, ಚುಣಾವಣಾ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ. ಪವರ್ ಟಿವಿ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿ ಮನೆ ಮಾತಾಗಿದ್ದು, ಅಂತೆಯೇ ಚುಣಾವಣಾ ಪೂರ್ವ ಸಮೀಕ್ಷೆಯಲ್ಲೂ ಅಷ್ಟೇ ಜನಮನ್ನಣೆ ಗಳಿಸಿದೆ.
ಕಾಲ್ ಮಾಡಿ ವೋಟ್ ಮಾಡಿ ಎಂಬ ವಿನೂತನ ಪ್ರಯತ್ನದಿಂದ ಪವರ್ ಟಿವಿ ಜನಮತ ತಿಳಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಪವರ್ ಟಿವಿ 224 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಯಾವ ಪಕ್ಷಕ್ಕೆ ಜನ ಬೆಂಬಲವಿದೆ. ಯಾವ ಪಕ್ಷ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ತಿಳಿಸಿದೆ.
ಪವರ್ ಸಮೀಕ್ಷೆಯಲ್ಲಿ ಒಟ್ಟು 224 ಕ್ಷೇತ್ರಗಳ ಪೈಕಿ ಬಿಜೆಪಿಗೆ 90 ಸ್ಥಾನ, ಕಾಂಗ್ರಸ್ಗೆ 99 ಸ್ಥಾನ ಹಾಗೂ JDSಗೆ 32 ಸ್ಥಾನ ದೊರಕಿದ್ದು, ಇತರೆಗೆ 3 ಸ್ಥಾನ ಲಭ್ಯವಾಗಲಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಕಡೆ ಜನ ಒಲವು ತೋರಿದ್ದಾರೆ.
ಪವರ್ ಟಿವಿ ಪಕ್ಕಾ ಮಾಹಿತಿ ನೀಡಿದ್ದು, ಜನಾಭಿಪ್ರಯಾವನ್ನು ರಾಜ್ಯದ ಜನತೆ ಮುಂದೆ ಇಡುವ ಕೆಲಸ ಮಾಡಿದೆ.