ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇದೆಯೇ ಎಂದು ಪವರ್ ಬೇಟೆ ಸ್ಟಿಂಗ್ ಆಪರೇಷನ್ ಪ್ರಸ್ತಾಪಿಸಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಎಂ.ಜಿ.ಮಹೇಶ್, ಕಾಂಗ್ರೆಸಿನ 29 ಶಾಸಕರು ಪವರ್ ಟಿವಿ ಸ್ಟಿಂಗ್ ಆಪರೇಶನಲ್ಲಿ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದಿದ್ದಾರೆ. ಹನ್ನೊಂದು ಜನ ಶಾಸಕರ ಭವನದಲ್ಲಿಯೇ ಹಣ ಸ್ವೀಕರಿಸಿದ್ದಾರೆ. ಉಳಿದವರು ಖಾಸಗಿ ಹೊಟೇಲ್ ನಲ್ಲಿ ಹಣ ಪಡೆದಿದ್ದಾರೆ. ಈ ಬಗ್ಗೆ ಏನು ಹೇಳ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟು 29 ಜನ ಶಾಸಕರು ರೆಡ್ ಹ್ಯಾಂಡ್ ಆಗಿ ಹಣ ತೆಗೊಂಡಿದ್ದು ಪವರ್ ಸ್ಟಿಂಗಲ್ಲಿ ಪತ್ತೆಯಾಗಿದೆ. ಕಾಂಗ್ರೆಸ್ ಶಾಸಕರು ಬೇರೆ ಬೇರೆ ವಾಮಮಾರ್ಗದಲ್ಲಿ ಹಣ ತೆಗೆದುಕೊಂಡಿರುವುದು ರೆಕಾರ್ಡ್ ಆಗಿದೆ. ಈಗ ಸಿದ್ದರಾಮಯ್ಯ ಅವರಲ್ಲಿ ಕೇಳ್ತೀನಿ, ಪ್ರತಿ ಮಾತಿಗೂ ನಲ್ವತ್ತು ಪರ್ಸೆಂಟ್ ಅಂತೀರಲ್ಲ, ನಿಮ್ಮ ಶಾಸಕರು ದುಡ್ಡು ತೆಗೆದುಕೊಳ್ಳುತ್ತಿರುವ ವಿಡಿಯೋ ಬಗ್ಗೆ ಏನು ಹೇಳುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಬೇಲ್ ಮೇಲೆ ಹೊರಗಿದ್ದಾರೆ
ನಿಮ್ಮ ಶಾಸಕಿಯೊಬ್ಬರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಕೊಟ್ಡಿದ್ದರು. ನಿಮ್ಮ ರಾಷ್ಟ್ರೀಯ ನಾಯಕರಿಂದ ಹಿಡಿದು ರಾಜ್ಯ ಅಧ್ಯಕ್ಷರೆಲ್ಲಾ ಬೇಲ್ ನಲ್ಲಿದ್ದಾರೆ. 29 ಶಾಸಕರ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟನೆ ನೀಡಬೇಕು, ದುಡ್ಡು ತೆಗೆದುಕೊಂಡಿದ್ದು ಹೌದೋ, ಅಲ್ವಾ ಎಂದು ಹೇಳಿ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.