Saturday, January 4, 2025

🕚 JUST IN :

ಇಂದು ಡಬಲ್ ಧಮಾಕಾ : ಕನ್ನಡಿಗ ರಾಹುಲ್ ಬಳಗದಲ್ಲಿ ಸ್ಟಾರ್ ಆಟಗಾರರ ದಂಡು

ಬೆಂಗಳೂರು : 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇಂದು ಐಪಿಎಲ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮಧ್ಯಾಹ್ನ 3.30ಕ್ಕೆ ಹಾಗೂ ಲಕ್ಕೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ರಾತ್ರಿ 7.30ಕ್ಕೆ ಹಣಾಹಣಿ ನಡೆಯಲಿದೆ.

ಪಂಜಾಬ್, ಕೋಲ್ಕತ್ತಾ ಮತ್ತು ದೆಹಲಿ ತಂಡಗಳು ಹೊಸಬರ ನಾಯಕತ್ವದಲ್ಲಿ ಆಡಲಿವೆ. ಧವನ್ ನಾಯಕತ್ವದಲ್ಲಿ ಪಂಜಾಬ್, ನಿತೀಶ್ ರಾಣಾ ನಾಯಕತ್ವದಲ್ಲಿ ಕೋಲ್ಕತ್ತಾ ಮತ್ತು ವಾರ್ನರ್ ನಾಯಕತ್ವದಲ್ಲಿ ಡೆಲ್ಲಿ ಕಣಕ್ಕಿಳಿಯುತ್ತಿದೆ.

ಪಂಜಾಬ್ ತಂಡ

ಶಿಖರ್ ಧವನ್(ನಾಯಕ), ಶಾರುಖ್ ಖಾನ್, ಬಾನುಕಾ ರಾಜಪಕ್ಷ, ಸಿಕಂದರ್ ರಾಜ, ಸ್ಯಾಮ್ ಕುರ್ರನ್, ರಿಶಿ ಧವನ್, ರಾಹುಲ್ ಚಹರ್, ಅರ್ಶ್​ದೀಪ್ ಸಿಂಗ್.

ಕೋಲ್ಕತ್ತಾ ತಂಡ

ನಿತೀಶ್ ರಾಣಾ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್​ ಥಾಕೂರ್, ವರುಣ್ ಚಕ್ರವರ್ತಿ, ರೆಹಮ್ಮದುಲ್ಲ ಗುರ್ಬಜ್, ಫರ್ಗುಸನ್, ಉಮೇಶ್ ಯಾದವ್

ಲಖನೌ ತಂಡ

ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟಾಯಿನಿಸ್, ಆಯುವ್ ಬದೋನಿ, ಕ್ರುನಾಲ್ ಪಾಂಡ್ಯ, ದೀಪಕ್ ಹೂಡ, ಜಯದೇವ್ ಉನಾದ್ಕಟ್, ಆವೇಶ್ ಖಾನ್, ರವಿ ಬಿಷ್ಟೋಯಿ, ಅಮಿತ್ ಮಿಶ್ರಾ

ಡೆಲ್ಲಿ ತಂಡ

ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಶ್, ಸರ್ಫರಾಜ್ ಖಾನ್, ರೋಮನ್ ಪಾವೆಲ್, ಪಿಲಿಪ್ ಸಾಲ್ಟ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಕುಲ್ದೀಪ್

RELATED ARTICLES

Related Articles

TRENDING ARTICLES