Wednesday, January 22, 2025

‘ಅತ್ತಿಗೆ.. ಯಶ್ 19’ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಿ : ರಾಧಿಕಾಗೆ ಪ್ಯಾನ್ಸ್ ಆವಾಜ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಪೋಸ್ಟ್ ಮಾಡಿರುವ ಫೋಟೋಗೆ ಯಶ್ ಅಭಿಮಾನಿಗಳು ಕಮೆಂಟ್ ಮಾಡಿ ಧಮ್ಕಿ ಹಾಕಿರುವುದು ಎಲ್ಲೆಡೆ ವೈರಲ್ ಆಗಿದೆ.

ರಾಧಿಕಾ ತಮ್ಮ ಹುಟ್ಟುಹಬ್ಬಕ್ಕೆ ವಿದೇಶಕ್ಕೆ ಹೋಗಿದ್ದ ವೆಕೇಷನ್ ಫೋಟೊ ಶೇರ್ ಮಾಡಿದ್ದರು. ಈ ಫೋಟೊಗೆ ಅಭಿಮಾನಿಯೊಬ್ಬರು ‘ಅತ್ತಿಗೆ.. ಯಶ್ 19ನೇ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಿ. ಇಲ್ಲದಿದ್ದರೆ ಸ್ಟ್ರೈಕ್ ಮಾಡಿತ್ತೀವಿ’ ಎಂದು ನೇರ ಧಮ್ಕಿ ಹಾಕಿದ್ದಾರೆ.

ಕೆಜಿಎಫ್ ಸಿನಿಮಾ ಬಳಿಕ ಯಶ್ ಯಾವುದೇ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.  ಇದೀಗ ರಾಕಿ ಭಾಯ್ ಅಭಿಮಾನಿಗಳು ರಾಧಿಕಾಗೆ ಮಾಡಿರುವ ಕಾಮೆಂಟ್ ಭಾರೀ ಗಮನಸೆಳೆದಿದೆ.

ನರ್ತನ್ ಜೊತೆ ನೆಕ್ಸ್ಟ್ ಸಿನಿಮಾ?

ಇನ್ನೂ ನಟ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಪ್ರಾಜೆಕ್ಟ್ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಶಂಕರ್ ಜೊತೆ ಯಶ ಮುಂದಿನ ಸಿನಿಮಾ ಮಾಡುತ್ತಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ, ಯಶ್ ಪ್ಯಾನ್ಸ್ ಬೇಸರದಲ್ಲಿದ್ದಾರೆ.

ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬಂದಿತ್ತು. ಈ ಸಿನಿಮಾ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿತ್ತು. ಯಶ್ ಯಾವ ಪ್ರಾಜೆಕ್ಟ್​ ಒಪ್ಪಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ, ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ.

ಯಶ್ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಯಾವಾಗ ಯಶ್ ಹೊಸ ಸಿನಿಮಾ ಅಪ್ಡೇಟ್ ಕೊಡ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ, ರಾಧಿಕಾ ಪಂಡಿತ್ ಅವರನ್ನು ಯಶ್ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES