ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಮೂಹುರ್ತ ಫಿಕ್ಸ್ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳು ಫುಲ್ ಆ್ಯಕ್ಟಿವ್ ಆಗಿವೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲಿಸ್ ಆಗಿದ್ದು, ಇತ್ತ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭರ್ಜರಿ ಕಸರತ್ತು ನಡೆಯುತ್ತಿದೆ.
ಈ ಮಧ್ಯೆ ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಸಹೋದರರ ಮಧ್ಯೆ ಫೈಟ್ ನಡೆಯುತ್ತಿದೆ. ನಿತೀನ್ ಗುತ್ತೇದಾರ್‌ಗೆ ಟಿಕೆಟ್ ಸಿಗಲೆಂದು ಅಭಿಮಾನಿಗಳು ಉರುಳು ಸೇವೆ ಮಾಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿರೋ ಕಲಬುರಗಿ ಜಿಲ್ಲೆ ಅಫಜಲಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಸಹೋದರರಾದ ನಿತೀನ್ ಗುತ್ತೇದಾರ್ ಮತ್ತು ಮಾಲೀಕಯ್ಯ ಮಧ್ಯೆ ಟಫ್ ಫೈಟ್ ಆರಂಭವಾಗಿದೆ.
ದತ್ತಾತ್ರೇಯ ದೇವಸ್ಥಾನದವರೆಗೆ ಉರುಳು ಸೇವೆ
ನಿತೀನ್ ಗುತ್ತೇದಾರ್‌ಗೆ ಅಫಜಲಪುರ ಬಿಜೆಪಿ ಟಿಕೆಟ್ ಸಿಗಲೆಂದು ಅಭಿಮಾನಿಗಳು ಚೌಡಾಪುರ ಕ್ರಾಸ್‌ನಿಂದ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನದವರೆಗೆ ಉರುಳು ಸೇವೆ ಮಾಡಿದ್ದಾರೆ. ಟಿಕೆಟ್‌ಗಾಗಿ ಅತ್ತ ಮಾಲೀಕಯ್ಯ ಗುತ್ತೇದಾರ್ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಈ ಬಾರಿ ಕ್ಷೇತ್ರದಿಂದ ತನೆಗೆ ಟಿಕೆಟ್ ನೀಡಬೇಕೆಂದು ನಿತೀನ್ ಗುತ್ತೇದಾರ್ ಕೂಡ ಪಟ್ಟು ಹಿಡಿದಿದ್ದಾರೆ.
ರಾಜ್ಯ ಹಾಗೂ ದೆಹಲಿ ನಾಯಕರನ್ನು ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಇತ್ತ ಅಭಿಮಾನಿಗಳು ಟಿಕೆಟ್‌ಗಾಗಿ ದೇವರ ಮೊರೆ ಹೋಗಿದ್ದಾರೆ. ಗಾಣಗಾಪುರದ ದತ್ತನ ದೇವಸ್ಥಾನವರೆಗೆ ಉರುಳು ಸೇವೆ ಮಾಡಿ ನಿತೀನ್ ಗುತ್ತೇದಾರ್ ಹೆಸರಿನ ಮೇಲೆ ವಿಶೇಷ ಪೂಜೆ ಮಾಡಿಸಿ ಟಿಕೆಟ್ ಸಿಗಲೆಂದು ವಿಶೇಷವಾಗಿ ಪ್ರಾರ್ಥಿಸಿದ್ದಾರೆ.
ಪುತ್ರನಿಗೆ ಟಿಕೆಟ್ ನೀಡುವಂತೆ ಬೇಡಿಕೆ
ಇನ್ನೂ ಅಫಜಲಪುರ ಕಾಂಗ್ರೆಸ್‌ನ ಭದ್ರಕೋಟೆ ಅಂತಾನೇ ಕರೆಯಲಾಗಿದೆ. ಅಫಜಲಪುರ ಇತಿಹಾಸದಲ್ಲಿ ನಡೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್ 9 ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು ವಿಶೇಷವಾಗಿದೆ. ಈ ಬಾರಿ ಅಫಜಲಪುರ ಕ್ಷೇತ್ರದಲ್ಲಿ ಎಂಟಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಟಿಕೆಟ್‌ಗಾಗಿ ಶಾಸಕ ಎಂ.ವೈ ಪಾಟೀಲ್ ಪುತ್ರರಾದ ಅರುಣ್‌ಕುಮಾರ್ ಪಾಟೀಲ್ ಮತ್ತು ಡಾ. ಸಂಜೀವ್‌ಕುಮಾರ್ ಪಾಟೀಲ್ ಮಧ್ಯೆ ಟಿಕೆಟ್‌ಗಾಗಿ ಫೈಟ್ ನಡೆಯುತ್ತಿದ್ದರೆ, ಇತ್ತ ಎಂ. ವೈ ಪಾಟೀಲ್ ಚುನಾವಣಾ ಕಣದಿಂದ ಹಿಂದೆ ಸರಿದ್ರೆ ತಮಗೆ ಟಿಕೆಟ್ ನೀಡಬೇಕೆಂದು ಉಳಿದ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ.
ಅತ್ತ ಎಂ.ವೈ ಪಾಟೀಲ್ ಕೂಡ ಪುತ್ರ ಅರುಣ್‌ಕುಮಾರ ಪಾಟೀಲ್ ಪರ ಒಲವು ವ್ಯಕ್ತಪಡಿಸಿದ್ದರಿಂದ, ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲಿಸ್ ಆದರೂ ಸಹ, ಅಫಜಲಪುರ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಹೈಕಮಾಂಡ್ ಎಂ.ವೈ ಪಾಟೀಲ್ ಪರ ಒಲವು ವ್ಯಕ್ತಪಡಿಸಿದ್ರೆ, ಇತ್ತ ಎಂ.ವೈ ಪಾಟೀಲ್, ನನಗೆ ವಯಸ್ಸಾಗಿದೆ. ಹೊಸ ಮುಖದ ಜೊತೆಗೆ ಯುವಕರಿಗೆ ಟಿಕೆಟ್ ಕೊಡಿ ಅಂತಾ ಹೇಳುವುದರ ಜೊತೆ ನೇರವಾಗಿಯೇ ಅರುಣ್‌ಕುಮಾರ ಪಾಟೀಲ್ ಪರ ಬ್ಯಾಟ್ ಬಿಸಿರೋದು ನೋಡಿದ್ರೆ ಬಹುತೇಕ ಅರುಣ್‌ಗೆ ಟಿಕೆಟ್ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.