Monday, December 23, 2024

ಎಲ್ಲಿ ನೋಡಿದ್ರೂ RCB..! ಭಾನುವಾರದ ಮ್ಯಾಚ್ ಟಿಕೆಟ್ ಗೆ ಮುಗಿಬಿದ್ದ ಪ್ಯಾನ್ಸ್

ಬೆಂಗಳೂರು : ಆರ್.ಸಿ.ಬಿ..! ಆರ್.ಸಿ.ಬಿ..! ಐಪಿಎಲ್ ಫೀವರ್ ಶುರುವಾಗಿದ್ದೇ ತಡ ಆರ್.ಸಿ.ಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಏಪ್ರಿಲ್​​​​ 2ರಂದು ಮುಂಬೈ-ಬೆಂಗಳೂರು ನಡುವೆ ಮ್ಯಾಚ್​ ನಡೆಯಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಿಲೋಮೀಟರ್​​ಗಟ್ಟಲೆ ಪ್ಯಾನ್ಸ್ ಕ್ಯೂ ನಿಂತಿದ್ದಾರೆ.

ಹೌದು, ಇಂದಿನಿಂದ ಐಪಿಎಲ್ ಚುಟುಕು ಸಮರ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ ಗುಜರಾತ್ ಸೆನಸಲಿವೆ. ಆದರೆ, ಆರ್.ಸಿ.ಬಿ ಪ್ಯಾನ್ಸ್ ಏಪ್ರಿಲ್ 2ರಂದು ನಡೆಯಲಿರುವ ಪಂದ್ಯಕ್ಕಾಗಿ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

15 ವರ್ಷದಿಂದ ಆರ್.ಸಿ.ಬಿ ಕಪ್​ ಗೆದ್ದಿಲ್ಲ. ಹಾಗಂತ ನಾವು ಆರ್.ಸಿ.ಬಿ ತಂಡವನ್ನು ಬಿಡಲ್ಲ. ನಂಬಿಕೆನೂ ಕಳೆದುಕೊಂಡಿಲ್ಲ. ಇನ್ನು 50 ವರ್ಷ ಆದ್ರೂ ನಾವ್ ಬಿಡಲ್ಲ ಎಂದು ಅಭಿಮಾನಿಗಳು ತಮ್ಮ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.

ಇದೇ ಏಪ್ರಿಲ್​​​​ 2ರಂದು ಮುಂಬೈ-ಬೆಂಗಳೂರು ನಡುವೆ ಮ್ಯಾಚ್​ ನಡೆಯಲಿದೆ. ಹೀಗಾಗಿ, ಹೈವೋಲ್ಟೇಜ್ ಮ್ಯಾಚ್​ ನ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಭಾನುವಾರದ ಮ್ಯಾಚ್​ಗೆ ಟಿಕೆಟ್​ ಖರೀದಿ ಭರಾಟೆ ಶುರುವಾಗಿದ್ದು, ದಿನವಿಡೀ ಅಭಿಮಾನಿಗಳು ರಸ್ತೆಯಲ್ಲೇ ಕಾದಿದ್ದಾರೆ.

10 ಸಾವಿರಕ್ಕೂ ಹೆಚ್ಚು ಪ್ಯಾನ್ಸ್ ಕ್ಯೂ

ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್​ಗೆ ಕ್ಯೂ ನಿಂತಿದ್ದಾರೆ. ಗೇಟ್​ ನಂಬರ್​​ 2ರ ಮುಂದೆ ಟಿಕೆಟ್ ​ಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂನಿಂತಿರುವ ದೃಶ್ಯ ಕಂಡುಬಂದಿದೆ. ಈ ಐಪಿಎಲ್‌ನಲ್ಲಿ ಒಟ್ಟು 70 ಲೀಗ್, 3 ಪ್ಲೇ-ಆಫ್ ಹಾಗೂ ಒಂದು ಫೈನಲ್ ಪಂದ್ಯ ನಡೆಯಲಿದೆ.

ರೊಚ್ಚಿಗೆದ್ದ RCB ಪ್ಯಾನ್ಸ್

ಇದೇ ಭಾನುವಾರ ಸಂಜೆ 7.30ಕ್ಕೆ  ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದ್ರಿಂದ ನೆನ್ನೆ ರಾತ್ರಿಯಿಂದಲೂ ಟಿಕೆಟ್​ಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಲೋಮೀಟರ್ ಗಟ್ಟಲೆ ಸರತಿ ಸಾಲು ನಿಂತಿದ್ರೂ ಕೂಡಾ ಟಿಕೆಟ್ ನೀಡುತ್ತಿಲ್ಲ. ಪ್ರಿಂಟಿಂಗ್ ಮಷಿನ್ ಕೆಟ್ಟಿದೆ ಎಂದು ಕಾರಣ ಹೇಳಿ ಜನರನ್ನು ಕಾಯಿಸುತ್ತಿದ್ದಾರೆ. ಇದರಿಂದ ಆರ್.ಸಿ.ಬಿ (RCB) ಪ್ಯಾನ್ಸ್ ಗಳು ಕ್ರೀಡಾ ಪ್ರಾಧಿಕಾರದ ಸಿಬ್ಬಂದಿಗಳ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದಿನಿಂದ ಐಪಿಎಲ್ ಹಬ್ಬ

ಇಂದಿನಿಂದ ಐಪಿಎಲ್ 16 ಅದ್ದೂರಿ ಆರಂಭ ಕಾಣಲಿದೆ. ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಎದುರಿಸಲಿದೆ. ಅದಕ್ಕೂ ಮೊದಲು ಗ್ರ್ಯಾಂಡ್ ಓಪನಿಂಗ್ ಸೆರಮನಿ ನಡೆಯಲಿದೆ.

RELATED ARTICLES

Related Articles

TRENDING ARTICLES