Wednesday, January 22, 2025

JDSಗೆ ರೇವಣ್ಣನೇ ಮುಳುವಾದ್ರಾ? : ಸ್ವರೂಪ್ ಮೇಲೆ ಕೆಂಡಕಾರಿದ್ದು ಯಾಕೆ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ್ರೂ, ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಮುಂದುವರಿದಿದೆ. ಹಾಸನದಲ್ಲಿ ಜೆಡಿಎಸ್ ಸೋತ್ರೂ ಪರವಾಗಿಲ್ಲ ಸ್ವರೂಪ್​ಗೆ ಟಿಕೆಟ್ ಬೇಡ ಅಂತ ರೇವಣ್ಣ ಪಟ್ಟು ಹಿಡಿದಿದ್ದಾರೆ.

ಹೌದು, ಸ್ವರೂಪ್‌ ಅವರಿಗೆ ಜೆಡಿಎಸ್ ಟಿಕೆಟ್ ತಪ್ಪಿಸಲೇಬೇಕೆಂದು ಮಾಜಿ ಸಚಿವ ರೇವಣ್ಣ ಹಠಕ್ಕೆ ಬಿದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೂಲಕ ಟಿಕೆಟ್‌ಗೆ ಲಾಬಿ ಮಾಡುತ್ತಿರುವುದಕ್ಕೆ ಸ್ವರೂಪ್ ಮೇಲೆ ರೇವಣ್ಣ ಕೆಂಡ ಕಾರ್ತಿದ್ದಾರೆ.

ಸ್ವರೂಪ್ ಬೆನ್ನಿಗೆ ನಿಂತಿರೋ ಕುಮಾರಸ್ವಾಮಿ ಹೇಳಿಕೆಗಳಿಂದ ರೇವಣ್ಣ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಸ್ವರೂಪ್‌ಗೆ ಟಿಕೆಟ್ ತಪ್ಪಿಸಿದ್ರೆ ಜೆಡಿಎಸ್ ಕಾರ್ಯಕರ್ತರ ಮನಸ್ಸಿನ ಮೇಲೆ ಆಘಾತ ಉಂಟಾಗಲಿದ್ದು, ಹಾಸನ ಕ್ಷೇತ್ರದ ಜೊತೆಗೆ 10ಕ್ಕೂ ಹೆಚ್ಚಿನ ಕ್ಷೇತ್ರಗಳ ಮೇಲೆ ಎಫೆಕ್ಟ್ ಸಾಧ್ಯತೆ ಇದೆ.

ಜೆಡಿಎಸ್ ಭದ್ರಗೊಳಿಸಿಸಲು ಕುಮಾರಣ್ಣ ಪ್ಲ್ಯಾನ್

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಗೊಳಿಸಿಕೊಳ್ಳಲು ಎಚ್.ಡಿ. ಕುಮಾರಸ್ವಾಮಿ ಪ್ಲ್ಯಾನ್‌ ಮಾಡಿಕೊಂಡಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅನಾರೋಗ್ಯದ ಮಧ್ಯೆಯೂ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಸಕ್ಸಸ್‌ ಆಗಿದೆ.

ಸ್ವರೂಪ್ ಯಾರು ಅಂತಾ ಗೊತ್ತಿಲ್ಲ

ಇನ್ನೂ, ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್.ಡಿ. ರೇವಣ್ಣ ಅವರು, ಸ್ವರೂಪ್ ಯಾರು ಅಂತಾ ಗೊತ್ತಿಲ್ಲ ಎಂದಿದ್ದರು. ಸ್ವರೂಪ್‌ ಗೊತ್ತಿಲ್ಲ ಎಂದಿದ್ದಕ್ಕೆ ರೇವಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

RELATED ARTICLES

Related Articles

TRENDING ARTICLES