Monday, December 23, 2024

ಶ್ರೀರಾಮನ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ : ಎಲ್ಲೆಡೆ ಭಾರೀ ಆಕ್ರೋಶ

ಬೆಂಗಳೂರು : ಬಿಜೆಪಿ ಶಾಸಕ ಶರಣು ಸಲಗರ ಅವರು ಶ್ರೀರಾಮನವಮಿ ವೇಳೆ ಶ್ರೀರಾಮ ಮೂರ್ತಿಯ ಮೇಲೆಯೇ ಕಾಲಿಟ್ಟು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ರಾಜ್ಯ ಕಾಂಗ್ರೆಸ್ ಖಂಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯವರ ರಾಮಭಕ್ತಿ ಹೀಗಿದೆ ನೋಡಿ ಎಂದು ಲೇವಡಿ ಮಾಡಿದೆ.

ಬಿಜೆಪಿ ಪಕ್ಷ ಹಾಗೂ ನಾಯಕರಿಗೆ ‘ರಾಮ’ ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ನಳಿನ್ ಕುಮಾರ್ ಕಟೀಲ್ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ? ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ಧರ್ಮರಕ್ಷಣೆಯ ಕೈಂಕರ್ಯಗಳು?

ಮುರುಗೇಶ್ ನಿರಾಣಿ ಅವರು ದೇವತೆಗಳನ್ನು ಅವಮಾನಿಸಿದರು. ಸಿ.ಟಿ ರವಿ ಅವರು ಮಾಂಸ ತಿಂದು ದೇವಸ್ಥಾನ ಪ್ರವೇಶ ಮಾಡಿದರು. ಸಚಿವರಾದ ಆರ್. ಅಶೋಕ್, ಅಶ್ವತ್ಥನಾರಾಯಣ ಅವರು ಭೂತ ಕೋಲವನ್ನು ಅವಮಾನಿಸಿದರು. ಇದೇನಾ ಬಿಜೆಪಿಯ ಭಕ್ತಿ ಎಂದು ಕುಟುಕಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುಳಿಗ ದೈವದ ಅವಹೇಳನ ಮಾಡಿದರು. ಶರಣು ಸಲಗರ ಅವರು ಶ್ರೀ ರಾಮನ ಮೂರ್ತಿಯ ಮೇಲೆ ಕಾಲಿಟ್ಟರು. ಇದೇನಾ ಬಿಜೆಪಿ ಪಕ್ಷದ ಧರ್ಮರಕ್ಷಣೆಯ ಕೈಂಕರ್ಯಗಳು? ಎಂದು ಆಕ್ರೋಶ ಹೊರಹಾಕಿದೆ.

ರಾಮನ‌ ತೊಡೆ ಮೇಲೆ ನಿಂತು ಪೋಸ್

ಬಿಜೆಪಿ ಶಾಸಕ ಶಾಸಕ ಶರಣು ಸಲಗರ ರಾಮನ ತೊಡೆ ಮೇಲೆ ನಿಂತು ಶ್ರೀರಾಮನಿಗೆ ಅವಮಾನಗೊಳಿಸಿದ್ದಾರೆ. ಈ ಘಟನೆ ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾಯಾತ್ರೆ ವೇಳೆ ನಡೆದಿದೆ. ಶಾಸಕ ಶರಣು ಸಲಗರ ತೊಡೆ ಮೇಲೆ ನಿಂತು ಮರ್ಯಾದೆ ಪುರುಷೋತ್ತಮ ಶ್ರೀ ರಾಮನ ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. ಈ ಮೂಲಕ ರಾಮನವಮಿಯಂದೇ ಬಿಜೆಪಿ ಶಾಸಕ ಸಲಗರ ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ.

ರಾಮನ‌ ಮೂರ್ತಿ ಮೇಲೆ ನಿಂತು ಮಾಲಾರ್ಪಣೆ ಮಾಡಿದ್ದಕ್ಕೆ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಆಕ್ರೋಶ‌ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES