Monday, December 23, 2024

ಬೆಚ್ಚಿ ಬಿದ್ದ ಬೆಂಗಳೂರು : ಪಾರ್ಕ್ ನಲ್ಲಿದ್ದ ಯುವತಿ ಎಳೆದೊಯ್ದು ಕಾರ್ ನಲ್ಲೇ ಗ್ಯಾಂಗ್ ರೇಪ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನು ಎಳೆದೊಯ್ದ ಕಾಮುಕರು ಹುರಿದು ಮುಕ್ಕಿದ್ದಾರೆ. ರಾತ್ರಿ ಇಡೀ ಕಾರ್ ನಲ್ಲೆ ಸುತ್ತಾಡಿಸಿ ಅತ್ಯಾಚಾರ ಎಸಗಿದ್ದಾರೆ. ನಾಲ್ವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ಥೆ ನಲುಗಿ ಹೋಗಿದ್ದಾಳೆ.

ಹೌದು, ಮಾರ್ಚ್ 25ರ ರಾತ್ರಿ 9.30ರ ಸಮಯದಲ್ಲಿ ಬೆಂಗಳೂರಿನ ಹೃದಯ ಭಾಗದಂತಿರುವ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಬಳಿಕ ಪಾರ್ಕ್ ನಲ್ಲಿ ಕುಳಿತಿದ್ದ‌‌ ಯುವತಿ ನರಕಯಾತನೆ ಅನುಭವಿಸಿದ್ದಾಳೆ. ನಾಲ್ವರು ಕಾಮುಕರು ಮೃಗದಂತೆ ಎರಗಿದ್ದಾರೆ. ರಾತ್ರಿ‌ ಇಡೀ ಅತ್ಯಾಚಾರ ಎಸಗಿ ನಡು ರಸ್ತೆಯಲ್ಲೇ ಬಿಸಾಡಿ ಹೋಗಿದ್ದಾರೆ.

ಸ್ನೇಹಿತನನ್ನು ಹೆದರಿಸಿ ಕೃತ್ಯ

ಕೆಎ 01 ಎಂಬಿ 6169 ನಂಬರ್ ನ ಮಾರುತಿ ಸುಜುಕಿ 800 ಕಾರು, ಘಟನೆಯ ಭೀಕರತೆ ಹೇಳುತ್ತಿದೆ. ಹರಿದಿರುವ ಕಾರಿನ ಸೀಟ್ ಗಳು ಅತ್ಯಾಚಾರದ ಭಯಾನಕತೆ ಬಿಚ್ಚಿಡ್ತಿದೆ. ಅಂದು ರಾತ್ರಿ (ಮಾರ್ಚ್ 25) ಯುವತಿಯೊಬ್ಬಳು ಪಾರ್ಕ್ ನಲ್ಲಿ ಸ್ಬೇಹಿತನ ಜೊತೆಗೆ ಕುಳಿತಿದ್ದಳು. ಅಲ್ಲಿಗೆ ಆಗಮಿಸಿದ್ದ ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬ ಕಾಮುಕರು ಯುವತಿ ಜೊತೆಗಿದ್ದ ಸ್ನೇಹಿತನನ್ನು ಹೆದರಿಸಿ, ಈ ಕೃತ್ಯ ಎಸೆಗಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿಯೇ ಅತ್ಯಾಚಾರ

ನಂತರ ಯುವತಿ ಜೊತೆಗೆ ಜಗಳ ತೆಗೆದಿದ್ದಾರೆ. ತಾವು ತಂದಿದ್ದ 800 ಕಾರಿನಲ್ಲೇ ಕಿಡ್ನಾಪ್ ಮಾಡಿದ್ದಾರೆ. ಕಾರಿನಲ್ಲಿ ದೊಮ್ಮಲೂರು, ಇಂದಿರಾನಗರ, ಹೊಸೂರು ರಸ್ತೆ, ಅತ್ತಿಬೆಲೆ, ಆನೇಕಲ್ ಸೇರಿ ನೈಸ್ ರಸ್ತೆಯಲ್ಲೆಲ್ಲ ಸುತ್ತಾಡಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕಾರಿನಲ್ಲಿಯೇ ನರಕ ತೋರಿಸಿದ್ದಾರೆ.

ರಾತ್ರಿ 9.30 ಗಂಟೆಗೆ ಕಿಡ್ನಾಪ್ ಮಾಡಿಕೊಂಡು ಹೋದ ಆರೋಪಿಗಳು ಮಾರ್ಚ್.26ರ ಬೆಳಗಿನ ಜಾವ 3.30 ಗಂಟೆಗೆ ಯುವತಿ ಮನೆ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಫೀಲ್ಡಿಗಿಳಿದ ಕೋರಮಂಗಲ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

RELATED ARTICLES

Related Articles

TRENDING ARTICLES