Tuesday, December 24, 2024

ಪವರ್ ಬೇಟೆ ನಂ.26 : ದಳಪತಿ ‘ಶ್ರೀನಿವಾಸನ’ ಲಂಚ ‘ಪುರಾಣ’ ನೋಡಲೇ ಬೇಕು!

ಬೆಂಗಳೂರು : ಭ್ರಷ್ಟಾಚಾರಲ್ಲಿ ಬೆಂಗಳೂರು ನಗರ ಎಂಎಲ್ಎಗಳು ಮಾತ್ರವಲ್ಲ ಬೆಂಗಳೂರು ಗ್ರಾಮಾಂತರ ಶಾಸಕರು ಸಹ ಎತ್ತಿದ ಕೈ. ಮೊನ್ನೆ ತಾನೆ ರೌಡಿಶೀಟರ್ ಒಬ್ಬರ ಜೊತೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಜೆಡಿಎಸ್ ಶಾಸಕ ಇದೀಗ, ಲಂಚಾವತಾರದ ಮೂಲಕ ಜೆಡಿಎಸ್ ಪಕ್ಷಕ್ಕೆ ದೊಡ್ಡ ಮುಜುಗರ ತರಿಸಿದ್ದಾರೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಲಂಚ ಪುರಾಣ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಟಾ ಬಯಲಾಗಿದೆ. ಇದು ಜೆಡಿಎಸ್ ಪಕ್ಷಕ್ಕೆ ಇರಿಸು-ಮುರಿಸು ತಂದಿದೆ.

ಪವರ್ ಭೇಟೆ 3ನೇ ಚಾಪ್ಟರ್ ನಲ್ಲಿ ಆರನೇ ಬೇಟೆಯಾಗಿ ಸಿಕ್ಕಿಬಿದ್ದವರು ನೆಲಮಂಗಳ ಕ್ಷೇತ್ರದ ‘ಜೆಡಿಎಸ್’ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ. ಇವರಿಂದಲೂ ಡೀಲ್ ಮಗಾ ಡೀಲ್ ನಡೆದಿದೆ. ನೆಲಮಂಗಲ ಪಟ್ಟಣದಲ್ಲಿ ಓಎಫ್​ಸಿ ಕೇಬಲ್​ ಅಳವಡಿಕೆ ಸಂಬಂಧ ಪವರ್ ಟಿವಿ ತಂಡದ ಜೊತೆಗೆ ಡೀಲ್​ ನಡೆಸಿದ್ದರು.

ಒಂದು ಕಿಲೋಮೀಟರ್​ಗೆ ತಲಾ 2 ಲಕ್ಷ ರೂಪಾಯಿ ನೀಡುವಂತೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಡಿಮ್ಯಾಂಡ್​​ ಮಾಡುತ್ತಾರೆ. ಅನೇಕ ಚರ್ಚೆಗಳ ನಂತರ  ಚೌಕಾಶಿ ಮಾಡಿ ಕಿಲೋಮೀಟರ್​ಗೆ ಒಂದೂವರೆ ಲಕ್ಷಕ್ಕೆ ಶಾಸಕರ ಒಪ್ಪಿಗೆ ನೀಡುತ್ತಾರೆ. ಬಳಿಕ ಶಾಸಕರು ಅಡ್ವಾನ್ಸ್ ಆಗಿ ಲಂಚದ ರೂಪದಲ್ಲಿ ಸ್ವತಃ ತಾವೇ 2 ಲಕ್ಷ ಜೇಬಿಗಿಳಿಸುವ ಶಾಸಕರು ವಿಡಿಯೋ ಇದೀಗ ಪವರ್ ಟಿವಿಯ ಸ್ಟಿಂಗ್ ಆಪರೇಶನ್ ನಲ್ಲಿ ಲಭ್ಯವಾಗಿದೆ.

ಹೆಸರು: ಡಾ.ಕೆ.ಶ್ರೀನಿವಾಸಮೂರ್ತಿ

ಪಕ್ಷ: ಜೆಡಿಎಸ್

ಕ್ಷೇತ್ರ: ನೆಲಮಂಗಲ

ಜಿಲ್ಲೆ: ಬೆಂಗಳೂರು ಗ್ರಾಮಾಂತರ

ಸ್ಥಳ: ಫಾರ್ಮ್ ಹೌಸ್, ನೆಲಮಂಗಲ ಸಮೀಪ

ಲಂಚ: ಎರಡು ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES