Monday, December 30, 2024

ಪವರ್ ಬೇಟೆ ನಂ.28 : ‘ಅಪ್ಪ ಹೇಳವ್ರೆ, ಕಮ್ಮಿ ಮಾಡ್ಕೊಳ್ಳಲ್ಲ ರೀ..’ : ‘ಕೈ’ ಎಂಎಲ್ಎ ಪುತ್ರನ ದರ್ಬಾರ್

ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡ 28ನೇ ಬೇಟೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್. ಅಪ್ಪನ ಅಧಿಕಾರದ ಹೆಸರಲ್ಲಿ ಮಗ ಅಂಧ ದರ್ಬಾರ್ ಮಾಡಿದ್ದಾನೆ.

ಹೌದು, ವಿಜಯನಗರ ಜಿಲ್ಲೆ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಡೀಲ್ ಕುದುರಿಸಿರುವ ಲಂಚಾವತಾರ ರಾಜ್ಯದ ಜನತೆ ಮುಂದೆ ಬಟಾ ಬಯಲಾಗಿದೆ.

ಪವರ್ ಟಿವಿ ಬೇಟೆ ಚಾಪ್ಟರ್ 3ರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿಗಳನ್ನು ಈಗಲೇ ಸೆಟ್ಲ್ ಮಾಡಿ ಅಂತ ಪಟ್ಟು ಹಿಡಿದು ಲಂಚ ಪಡೆಯುವ ಮೂಲಕ 28ನೇ ಬೇಟೆಯಾಗಿ ಸಿಕ್ಕಿಬಿದ್ದ ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ.

6 ಲಕ್ಷ ನೀಡುವಂತೆ ಬೇಡಿಕೆ

ಹೂವಿನಹಡಗಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಜೊತೆ ಪವರ್ ಟಿವಿ ಸ್ಟಿಂಗ್ ತಂಡ ಮಾತುಕತೆ ನಡೆಸಿತ್ತು. ಕಿಲೋಮೀಟರ್​ಗೆ ತಲಾ 6 ಲಕ್ಷ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದರು.

ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕರೊಂದಿಗೆ ಡೀಲ್ ಮಾತುಕತೆ ನಡೆದಿತ್ತು. ಬಳಿಕ ತಮ್ಮ ಪುತ್ರನ ಜೊತೆ ಮಾತನಾಡುವಂತೆ ಮೊಬೈಲ್ ನಂಬರ್ ಕೊಟ್ಟಿದ್ದರು. ಆ ನಂಬರ್ ಗೆ ಫೋನ್ ಮಾಡಿದ ನಂತರ ಸದಾಶಿವನಗರದ ಬಳಿ ಬರಲು ಎಂಎಲ್ಎ ಪುತ್ರ ಸೂಚಿಸಿದ್ದರು. ಓಎಫ್​ಸಿ ಕೇಬಲ್ ಅಳವಡಿಕೆಗೆ ಕಿಲೋಮೀಟರ್​ಗೆ ತಲಾ 6 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕಮ್ಮಿ ಮಾಡಿಕೊಳ್ಳಿ ಅಂದ್ರೆ ಬಿಲ್​​ಕುಲ್ ಒಪ್ಪಿಕೊಳ್ಳಲಿಲ್ಲ ಶಾಸಕ ಪರಮೇಶ್ವರ್ ನಾಯ್ಕ್ ಪುತ್ರ.

ಇದಲ್ಲದೆ, ಡೀಲ್ ಮಾತುಕತೆ ವೇಳೆ ಫೋನ್​ ಕೆಳಗಿಡುವಂತೆ ಶಾಸಕರ ಪುತ್ರ ತಾಕೀತು ಮಾಡಿದ್ದರು. ನಮ್ಮ ತಂದೆ ಹೇಳಿದ್ದಾರೆ ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳಲ್ಲ. ಒಟ್ಟು 6 ಲಕ್ಷ ರೂಪಾಯಿಗಳನ್ನು ಈಗಲೇ ಸೆಟ್ಲ್ ಮಾಡಿ, ಇಲ್ಲವಾದ್ರೆ ನೋ ಡೀಲ್ ಎಂದು ಖಡಕ್ ಆಗಿಯೇ ತಿಳಿಸಿದ್ದನು. ಪೂರ್ಣ ಹಣ ನೀಡದ ಕಾರಣ ಶಾಸಕರ ಪುತ್ರನೊಂದಿಗೆ ಡೀಲ್ ಮಾತುಕತೆ ಮುರಿದುಬಿದ್ದಿತ್ತು.

ಹೆಸರು: ಪಿ.ಟಿ.ಪರಮೇಶ್ವರ ನಾಯ್ಕ್

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಹೂವಿನಹಡಗಲಿ

ಜಿಲ್ಲೆ: ವಿಜಯನಗರ

ಸ್ಥಳ: ಶಾಸಕರ ಭವನ, ಬೆಂಗಳೂರು

ಲಂಚ: 6 ಲಕ್ಷ ರೂಪಾಯಿಗೆ ಡಿಮ್ಯಾಂಡ್

RELATED ARTICLES

Related Articles

TRENDING ARTICLES