Thursday, December 26, 2024

ಪವರ್ ಬೇಟೆ ನಂ.29 : ಕಾರಿನಲ್ಲೇ ಅಡ್ವಾನ್ಸ್ ಪಡೆದ ದೇವನಹಳ್ಳಿ ‘ದಳಪತಿ’

ಬೆಂಗಳೂರು : ಲಂಚಬಾಕ ಶಾಸಕರ ಅಡ್ಡಾಗೆ ಭೇಟಿ ಕೊಡುವ ಪವರ್​​​ ಟಿವಿ ಸ್ಟಿಂಗ್ ಆಪರೇಷನ್ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 29ನೇ ಬೇಟೆ ದೇವನಹಳ್ಳಿ ‘ದಳಪತಿ’.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಪವರ್ ಟಿವಿ ಬೇಟೆ ಚಾಪ್ಟರ್ 3ರಲ್ಲಿ ದೇವನಹಳ್ಳಿ ಕ್ಷೇತ್ರದ ‘ಜೆಡಿಎಸ್’ ಶಾಸಕ ನಿಸರ್ಗ ನಾರಾಯಣಸ್ವಾಮಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧವಾಗಿ ಪರ್ಮಿಶನ್ ನೀಡಲು ಕಿಲೋಮೀಟರ್​ಗೆ ಒಂದೂವರೆ ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಅಡ್ವಾನ್ಸ್​ ಕೊಡ್ತೀವಿ ಅಂದ್ರೆ ಒಪ್ಪದೆ ಫುಲ್​​ ಪೇಮೆಂಟ್ ಮಾಡಿ ಎಂದು ಖಡಕ್ ಆಗಿಯೇ ಸೂಚಿಸಿದ್ದರು.

ಶಾಸಕರ ಮನೆಯಲ್ಲಿಯೇ ಮಾತುಕತೆ

ದೇವನಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ ನಾವು ಓಎಫ್ ಸಿ ಕೇಬಲ್ ಅಳವಡಿಸುತ್ತೇವೆ ಪರ್ಮಿಷನ್ ಕೊಡಿ ಅಂತಾ ಶಾಸಕ ನಿಸರ್ಗ ನಾರಾಯಣಸ್ವಾಮಿ ಜೊತೆ ಪವರ್ ತಂಡ ಡೀಲ್ ಮಾತುಕತೆ ನಡೆಸಿತ್ತು. ದೇವನಹಳ್ಳಿಯ ಶಾಸಕರ ಮನೆಯಲ್ಲಿಯೇ ಮಾತುಕತೆ ನಡೆದಿತ್ತು. ಖಡಕ್ ಮಾತುಕತೆ ನಡೆಸಿದ ಶಾಸಕರು, ಲಂಚದ ಹಣವನ್ನು ತಮ್ಮ ಬೆಂಬಲಿಗ ಸಾದರಹಳ್ಳಿ ಮಹೇಶ್​ಗೆ ನೀಡುವಂತೆ ಸೂಚನೆ ನೀಡಿದ್ದರು.

ಕಾರ್ ಒಳಗೆ ಅಡ್ವಾನ್ಸ್

ಸಾದರಹಳ್ಳಿಯ ಮಹೇಶ್ ನಂಬರ್ ನೀಡಿ ಅವರ ಬಳಿಗೆ ಲಂಚದ ಹಣ ತಲುಪಿಸುವಂತೆ ತಾಕೀತು ಮಾಡಿದ್ದರು. ಸಾದರಹಳ್ಳಿ ಮಹೇಶ್ ದೇವನಹಳ್ಳಿ ಮುಖ್ಯ ರಸ್ತೆಗೆ ಬರುವಂತೆ ನಮ್ಮ ತಂಡಕ್ಕೆ ಸೂಚಿಸಿದ್ದರು. ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿ ಅಲ್ಲಿಯೇ ಹಣ ನೀಡುವಂತೆ ಹೇಳಿದ್ದರು. ಕಾರ್ ಒಳಗೆ ಅಡ್ವಾನ್ಸ್ ರೂಪದಲ್ಲಿ 2 ಲಕ್ಷ ರೂಪಾಯಿ ಹಣವನ್ನು ಶಾಸಕರ ಆಪ್ತ ಮಹೇಶ್ ಪಡೆದುಕೊಂಡರು. ಅಡ್ವಾನ್ಸ್ ಪಡೆದ ಬಳಿಕ ಶಾಸಕರಿಗೆ ಕಾಲ್ ಮಾಡಿ ಆಪ್ಡೇಟ್ ಮಾಡಿದ್ದರು.

ಹೆಸರು: ನಿಸರ್ಗ ನಾರಾಯಣಸ್ವಾಮಿ

ಪಕ್ಷ: ಜೆಡಿಎಸ್

ಕ್ಷೇತ್ರ: ದೇವನಹಳ್ಳಿ

ಜಿಲ್ಲೆ: ಬೆಂಗಳೂರು ಗ್ರಾಮಾಂತರ

ಸ್ಥಳ: ಶಾಸಕರ ನಿವಾಸ, ದೇವನಹಳ್ಳಿ

ಲಂಚ: ಎರಡು ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES