ಬೆಂಗಳೂರು : ಜೆಡಿಎಸ್ ಶಾಸಕ ಕೆ.ಅನ್ನದಾನಿ ಅವರು ಪಬ್ಲಿಕ್ ನಲ್ಲೇ ಲಂಚ ಸ್ವೀಕಾರ ಮಾಡಿದ್ರೆ, ಇತ್ತ ಸಂಡೂರು ಶಾಸಕ ಕತ್ತಲಿನಲ್ಲೇ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಯಾಕಂದ್ರೆ, ತನ್ನ ಲಂಚೋತ್ಸವ ಬೆಳಕಿನಲ್ಲಿ ಸೆರೆಯಾಗಬಾರದು ಅಲ್ವೇ? ಲಂಚ ಪಡೆಯುವುದರಲ್ಲಿ ಈ ಆಸಾಮಿ ಎಷ್ಟು ಡಿಫರೆಂಟ್ ಗೊತ್ತಾ?
ಹೌದು, ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಇ.ತುಕಾರಾಂ ಲಂಚ ಪಡೆಯುವಾಗ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 23ನೇ ಶಾಸಕ.
ಸಂಡೂರಿನಲ್ಲಿರುವ ತಮ್ಮ ನಿವಾಸದ ಎದುರಲ್ಲಿ ಮರದ ಕೆಳಗೆ ನಮ್ಮ ಸ್ಟಿಂಗ್ ತಂಡದ ಜೊತೆಗೆ ಸಂಡೂರು ಶಾಸಕ ಇ.ತುಕಾರಾಂ ಡೀಲ್ ಮಾತುಕತೆ ನಡೆಸಿದ್ದಾರೆ. ಡಿಫರೆಂಟ್ ಆಗಿ ಕತ್ತಲಿನಲ್ಲಿಯೇ ಡೀಲ್ ಮಾತುಕತೆ ನಡೆಸಿದ ಶಾಸಕರು, ತಮ್ಮ ಮೇಲೆ ಬೆಳಕು ಬೀಳದಂತೆ ಎಚ್ಚರಿಕೆ ವಹಿಸಿದ್ದರು.
ಓಎಫ್ಸಿ ಕೇಬಲ ಅಳವಡಿಕೆ ಸಂಬಂಧ ಕಿಲೋಮೀಟರ್ಗೆ ತಲಾ 2 ಲಕ್ಷ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 5 ಕಿಲೋಮೀಟರ್ಗೆ ತಲಾ 2 ಲಕ್ಷ ರೂಪಾಯಿಗೆ ಡೀಲ್ ಕುದುರಿಸಿದ್ದರು. ಅಡ್ವಾನ್ಸ್ ಲಂಚದ ಹಣವಾಗಿ 5 ಲಕ್ಷ ರೂಪಾಯಿ ನೀಡುವಂತೆ ತುಕಾರಾಂ ಡಿಮ್ಯಾಂಡ್ ಮಾಡಿದ್ದರು. ಬೆಂಗಳೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ಗೆ ಹಣ ತಲುಪಿಸುವಂತೆ ಸೂಚನೆ ನೀಡಿದ್ದರು.
ತುಕಾರಾಂ ಡಿಮ್ಯಾಂಡ್ ಒಪ್ಪಿಕೊಂಡ ನಂತರ ನಮ್ಮ ಎಸ್ ಐಟಿಗೆ ಮೇಲೆ ಮೇಲೆ ಕರೆ ಮಾಡಿದ್ದರು. ಬೇಗನೆ ಹಣ ತಲುಪಿಸುವಂತೆ ಸತತವಾಗಿ ಕರೆ ಮಾಡಿ ಒತ್ತಡ ಹೇರಿದ್ದರು. ಇಂಥವರಿಗೆ ಹಣ ತಲುಪಿಸುವಂತೆ ಅವರ ನಂಬರ್ ಕೂಡ ಶಾಸಕ ನೀಡಿದ್ದರು. ವಿಶೇಷ ಎಂದರೆ ಈ ವೇಳೆ ಪವರ್ ಟಿವಿಯಲ್ಲಿ ಪವರ್ ಬೇಟೆಯಲ್ಲಿ ಬಯಲಾದ ಶಾಸಕರ ಲಂಚಾವತಾರ ಪ್ರಸಾರವಾಗಿತ್ತು. ಇದನ್ನು ನೋಡದೆಯೇ ನಮ್ಮ ತಂಡಕ್ಕೆ ಕರೆ ಮಾಡಿ ಹಣ ಭೇಗ ನೀಡುವಂತೆ ಕೇಳಿದ್ದು ವಿಪರ್ಯಾಸವೇ ಸರಿ.
ಹೆಸರು: ಇ.ತುಕಾರಾಂ
ಪಕ್ಷ: ಕಾಂಗ್ರೆಸ್
ಕ್ಷೇತ್ರ: ಸಂಡೂರು
ಜಿಲ್ಲೆ: ಬಳ್ಳಾರಿ
ಸ್ಥಳ: ಶಾಸಕರ ನಿವಾಸದ ಎದುರು, ಸಂಡೂರು
ಲಂಚ: 5 ಲಕ್ಷ ರೂಪಾಯಿಗೆ ಡಿಮ್ಯಾಂಡ್