Sunday, January 19, 2025

ಪವರ್ ಬೇಟೆ ನಂ.21: ‘ದಲಿತ ಸಂಘಟನೆ’ಗಳು ‘ಆಯ್ಕೊಂಡು ತಿನ್ನವ್ರು’ ಎಂದ ಶಾಸಕ ಶಿವಶಂಕರರೆಡ್ಡಿ

ಬೆಂಗಳೂರು : ಈಗಾಗಲೇ ಪವರ್ ಟಿವಿ ಮೆಗಾ ಬೇಟೆಯಲ್ಲಿ ರಾಜ್ಯದ 19 ಶಾಸಕರ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಸೆರೆಯಾಗಿದೆ. ರಾಜ್ಯದ ಜನತೆ, ಶಾಸಕರ ಹಣದಾಸೆಯನ್ನು ಕಣ್ಣಾರೆ ಕಂಡಿದ್ದಾರೆ. ಇದೀಗ, ನಮ್ಮ ತಂಡದ 21ನೇ ಬೇಟೆ ನಡೆಸಿದೆ. ಒಎಫ್​​ಸಿ ಕೇಬಲ್ ಅಳವಡಿಕೆ ಸಂಬಂಧ ಗೌರಿಬಿದನೂರು ಶಾಸಕರು ನಮ್ಮ ತಂಡದ ಜೊತೆಗೆ ಡೀಲ್​ ಮಾತುಕತೆ ನಡೆಸಿ ಸಿಕ್ಕಿಬಿದ್ದಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 21ನೇ ಶಾಸಕ.

ಒಎಫ್​​ಸಿ ಕೇಬಲ್ ಅಳವಡಿಕೆ ಸಂಬಂಧ ಗೌರಿಬಿದನೂರು ಶಾಸಕರ ಜೊತೆ ಡೀಲ್ ನಮ್ಮ ತಂಡ ಮಾತುಕತೆ ನಡೆಸಿತ್ತು. ಶಾಸಕ ಎನ್​​​.ಎಚ್​.ಶಿವಶಂಕರರೆಡ್ಡಿ ಸಾಫ್ಟ್​ ಆಗಿಯೇ ಡೀಲ್ ಮಾತುಕತೆ ನಡೆಸಿದ್ದಾರೆ. ಗೌರಿಬಿದನೂರು ಸಮೀಪದ ತೊಂಡೆಬಾವಿಯ ಪೆಟ್ರೋಲ್​ ಬಂಕ್​​ ಬಳಿ ಡೀಲ್ ಕುದುರಿಸಿದ್ದಾರೆ.

ತಮ್ಮದೇ ಒಡೆತನದ ಪೆಟ್ರೋಲ್ ಬಂಕ್​​ನಲ್ಲಿ ಶಾಸಕರು ಡೀಲ್ ಮಾತುಕತೆಗೆ ಇಳಿದರು. ಕಿಲೋಮೀಟರ್​ಗೆ ಇಂತಿಷ್ಟೇ ಲಂಚ ಕೊಡಬೇಕೆಂದು ಶಿವಶಂಕರರೆಡ್ಡಿ ಕೇಳಿದ್ದರು. ಅಂತಿಮವಾಗಿ ಅಡ್ವಾನ್ಸ್ ರೂಪದಲ್ಲಿ 2 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸಿದ್ದಾರೆ. ತಮ್ಮ ಪಿಎ ವೇಣು ಮೂಲಕ 2 ಲಕ್ಷ ರೂಪಾಯಿ ಪಡೆದಿದ್ದಾರೆ.

ಡೀಲ್ ವೇಳೆ ಶಾಸಕ ಶಿವಶಂಕರರೆಡ್ಡಿ ಸಂಘಟನೆಗಳ ಬಗ್ಗೆ ಹಗುರ ಮಾತುಗಳನ್ನಾಡಿದ್ದಾರೆ. ದಲಿತ ಸಂಘಟನೆಗಳ ಬಗ್ಗೆ ಮಾತನಾಡುವ ವೇಳೆ ಕೇವಲವಾದ ಮಾತು ಬಳಕೆ ಮಾಡಿದ್ದಾರೆ. ದಲಿತ ಸಂಘಟನೆಗಳು ಆಯ್ಕೊಂಡು ತಿನ್ನವ್ರು ಎಂದು ಉಲ್ಲೇಖಿಸಿದ್ದಾರೆ. ಹಿರಿಯ ನಾಯಕನಿಂದ ಗೌರವಾನ್ವಿತ ಸಂಘಟನೆಗಳ ಬಗ್ಗೆ ಹಗುರ ಮಾತು ಬಂದಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.

ಹೆಸರು: ಎನ್.ಎಚ್.ಶಿವಶಂಕರರೆಡ್ಡಿ

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಗೌರಿಬಿದನೂರು

ಜಿಲ್ಲೆ: ಚಿಕ್ಕಬಳ್ಳಾಪುರ

ಸ್ಥಳ: ಪೆಟ್ರೋಲ್ ಬಂಕ್, ತೊಂಡೆಬಾವಿ, ಗೌರಿಬಿದನೂರು

ಲಂಚ: 2 ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES