Wednesday, January 22, 2025

ಪವರ್ ಬೇಟೆ ನಂ.22 : ಪಬ್ಲಿಕ್ನಲ್ಲೇ ‘ಲಂಚ’ ಕಮಾಯ್ ಮಾಡಿದ ‘ಅನ್ನದಾನಿ’

ಬೆಂಗಳೂರು : ಲಂಚ ಪಡೆಯೋಕೆ ಯಾವ ಜಾಗವಾದ್ರೆ ಏನು? ಎಂಜಲು ಕಾಸಿಗೆ ಕೈ ಚಾಚಲು 4 ಗೋಡೆಯ ಕೋಣೆಯೇ ಬೇಕೇ? ನೋ, ಪಬ್ಲಿಕ್ ನಲ್ಲಿ ಹಾಡಹಗಲೇ ಲಂಚ ಕಬಳಿಸಬಹುದು ಎಎನ್ನುವುದಕ್ಕೆ ಈ ಶಾಸಕರೇ ಪ್ರತ್ಯಕ್ಷ ಸಾಕ್ಷಿ.

ಹೌದು, ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಅನ್ನದಾನಿ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 22ನೇ ಭ್ರಷ್ಟ ಶಾಸಕ.

ಅನ್ನದಾನಿ ಎಂದು ಹೆಸರಿಟ್ಟುಕೊಂಡಿರುವ ಈ ಆಸಾಮಿ ಪಬ್ಲಿಕ್ ನಲ್ಲೇ ಲಂಚಕ್ಕೆ ಮಂಚ ಏರಿದ್ದಾರೆ. ಪವರ್ ಮೆಗಾ ಬೇಟೆಯಲ್ಲಿ ನಮ್ಮ ತಂಡದ ಜೊತೆ ಭರ್ಜರಿ ಡೀಲ್ ಮಾತುಕತೆ ನಡೆಸಿದ್ದಾರೆ ಮಳವಳ್ಳಿ ಜೆಡಿಎಸ್ ಶಾಸಕ ಕೆ.ಅನ್ನದಾನಿ.

ಬೆಂಗಳೂರಿನಲ್ಲಿಯೇ ಡೀಲ್ ಮಾತುಕತೆ ನಡೆಸಲು ಮುಂದಾ ಮಳವಳ್ಳಿ ಶಾಸಕ, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಕಿಲೋಮೀಟರ್​ಗೆ ತಲಾ 2 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಸಿಟಿ ಸಿವಿಲ್ ಕೋರ್ಟ್ ಮುಂಭಾಗದ ಸೆಂಟ್ರಲ್ ಕಾಲೇಜ್ ಮೆಟ್ರೋ ಸ್ಟೇಷನ್​ ಬಳಿ ನಡೆದಾಡಿಕೊಂಡು ಡೀಲ್ ಕುದುರಿಸಿದ್ದಾರೆ.

ಪಬ್ಲಿಕ್​​ನಲ್ಲಿಯೇ ಡೀಲ್ ಮಾತುಕತೆ ಕುದುರಿದ ಚಾಣಾಕ್ಷ ಶಾಸಕ ಇವರೇ ನೋಡಿ. ತಲಾ 2 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿ, ಅಂತಿಮವಾಗಿ ತಲಾ 1 ಲಕ್ಷಕ್ಕೆ ಒಪ್ಪಿಕೊಂಡು ಅಡ್ವಾನ್ಸ್ ಪಡೆದಿದ್ದಾರೆ. ಅದು, ಸಾರ್ವಜನಿಕ ಸ್ಥಳದಲ್ಲಿಯೇ ಸಲೀಸಾಗಿ ಅನ್ನದಾನಿ 1 ಲಕ್ಷ ಜೇಬಿಗಿಳಿಸಿದ್ದಾರೆ.

 

ಹೆಸರು: ಕೆ.ಅನ್ನದಾನಿ

ಪಕ್ಷ: ಜೆಡಿಎಸ್

ಕ್ಷೇತ್ರ: ಮಳವಳ್ಳಿ

ಜಿಲ್ಲೆ: ಮಂಡ್ಯ

ಸ್ಥಳ: ಸಿಟಿ ಸಿವಿಲ್ ಕೋರ್ಟ್ ಮುಂಭಾಗ, ಬೆಂಗಳೂರು

ಲಂಚ: 1 ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES