Saturday, November 2, 2024

ಕುಮಾರಣ್ಣನೇ NEXT CM : ಬಿಜೆಪಿ, ಕಾಂಗ್ರೆಸ್ ಗೆ ಹೇಳೋಕೆ ಧಮ್ ಇದ್ಯಾ? : ಸಿ.ಎಂ ಇಬ್ರಾಹಿಂ

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಇಬ್ರಾಹಿಂ, ವಿಧಾನಸಭಾ ಚುನಾವಣೆ ಎದುರಿಸಲ ಜೆಡಿಎಸ್ ಪಕ್ಷ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ. ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಆದಷ್ಟು ಬೇಗ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಎದುರು ಸಿಎಂ ಆಗಿ ಪ್ರಮಾಣವನ ಸ್ವೀಕಾರ ಮಾಡಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇದನ್ನು ಹೇಳುವ ಧೈರ್ಯ ಇಲ್ಲ. ಕಾಂಗ್ರೆಸ್ ನಲ್ಲಿ 5 ಜನ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಮೋದಿನೇ ಎಲ್ಲ. ನಮ್ಮಲ್ಲಿ ಒಬ್ಬರೇ ಕ್ಯಾಪ್ಟನ್. ಜನರ ಮನಸ್ಸಿನಲ್ಲಿ ನಾವು ಇದ್ದೇವೆ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ಮುಂಡೇವು ಚೆನ್ನಾಗಿ ಕಾಣಲಿ

ಕಾಂಗ್ರೆಸ್-ಬಿಜೆಪಿ ಹಂಗ್ ಅಸೆಂಬ್ಲಿ ಅಂತ ಹೇಳ್ತಿರೋದು. ಮುಂಡೇವು ಚೆನ್ನಾಗಿ ಕಾಣಲಿ ಅಂತ ಮೇಕಪ್ ಮಾಡಿಕೊಳ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಮೆಜಾರಿಟಿ ಬೇಡ ಅಂತ ಇದೆ. ಬಿಜೆಪಿ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಜನರ ಮನಸ್ಸಿನಲ್ಲಿ ಇದೆ. ರೈತರ ಮಕ್ಕಳನ್ನು ಮದುವೆ ಆದ್ರೆ 2 ಲಕ್ಷ ಕೊಡ್ತೀವಿ. ಇದು ರೈತರ ಬಗ್ಗೆ ಇರೋ ಕಾಳಜಿ ಎಂದು ಹೇಳಿದ್ದಾರೆ.

ಅತ್ತೆ-ಸೊಸೆ ಹೊಡೆದಾಡ್ಬೇಕಾ?

ಕಾಂಗ್ರೆಸ್ ಮನೆ ಒಡೆತಿಗೆ ಎರಡು ಸಾವಿರ ರೂಪಾಯಿ ಕೊಡ್ತೀವಿ ಅಂದ್ರು. ಅತ್ತೆ ಏನು ಮಾಡಬೇಕು? ಸೊಸೆಗೆ 2 ಸಾವಿರ ಕೊಟ್ಟರೆ ಅತ್ತಿಗೆಗೆ ಏನ್ ಕೊಡ್ತೀರಾ? ಅವರು ಹೊಡೆದಾಡ್ಬೇಕಾ? ಮನೆಯಲ್ಲಿ ಕಾಂಗ್ರೆಸ್ ಜಗಳ ತಂದು ಇಡುತ್ತಿದೆ. ಕಾಂಗ್ರೆಸ್ ಮನೆ ಮನೆಗೂ ಜಗಳ ಹಚ್ಚಲು ಹೊರಟಿದೆ. 3 ಎಚ್.ಪಿಗೆ 24 ಗಂಟೆ ವಿದ್ಯುತ್ ಕೊಡ್ತೀವಿ. ರೈತರಿಗೆ ಮೀಟರ್ ಇಲ್ಲ. ಇದು ನಮ್ಮ ಜೆಡಿಎಸ್ ಭರವಸೆ. ಕಾಂಗ್ರೆಸ್ 200 ಯುನಿಟ್ ನಂಬಬೇಡಿ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES