ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ರಾಜಕೀಯ ಪಕ್ಷಗಳು 224 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಟಿಕೆಟ್ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಬಿಜೆಪಿ ಒಂದೂ ಕ್ಷೇತ್ರಕ್ಕೂ ಟಿಕೆಟ್ ಘೋಷಿಸಿಲ್ಲ.
ಹೌದು, ಇದೀಗ ಬಿಜೆಪಿ ಪಾಳಯದಲ್ಲಿ ಟಿಕೆಟ್ ಟೆನ್ಷನ್ ಜೋರಾಗಿದೆ. ಅಭ್ಯರ್ಥಿಗಳ ಆಯ್ಕೆ ಗೊಂದಲ ಬಗೆಹರಿಸಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ.
ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ 1 ರಿಂದ 4ರವರೆಗೆ ಅಮಿತ್ ಶಾ ಮೆಗಾ ಮೀಟಿಂಗ್ ಮಾಡಲಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಚುನಾವಣಾ ಚಾಣಕ್ಯ ಸಂಭಾವ್ಯರ ಪಟ್ಟಿ ಪರಿಶೀಲನೆ ನಡೆಸಲಿದ್ದಾರೆ. ಅಮಿತ್ ಶಾ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದ್ದಾರೆ.
ಏ. 5 ರಂದು ಕೋಲಾರದಲ್ಲಿ ‘ಕೈ’ಕಹಳೆ
ಏಪ್ರಿಲ್ 5 ರಂದು ಕೋಲಾರದಲ್ಲಿ ಕಾಂಗ್ರೆಸ್ ಕಹಳೆಗೆ ಸಿದ್ಧತೆ ಮಾಡಿಕೊಂಡಿದೆ. ಕೋಲಾರದಲ್ಲಿ ಸಮಾವೇಶಕ್ಕೆ ಕೈ ಪಡೆ ಭಾರೀ ಸಿದ್ಧತೆ ಮಾಡಿಕೊಂಡಿದೆ. ‘ಸತ್ಯಮೇವ ಜಯತೇ’ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದು, ಈ ಸಮಾವೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರಲಿದ್ದಾರೆ. ಇಡೀ ಸಮಾವೇಶ ರಾಹುಲ್ ಗಾಂಧಿ ಮೇನಿಯಾವಾಗಲಿದೆ. 2019 ರಲ್ಲಿ ಕೋಲಾರದಿಂದಲೇ ಮೋದಿ ವಿರುದ್ಧ ಗುಡುಗಿದ್ದ ರಾಹುಲ್, ಇದೀಗ ಈ ಕಾರಣಕ್ಕಾಗಿಯೇ ಸಂಸದ ಸ್ಥಾನ ರದ್ದಾಗಿದೆ.
ಕೋಲಾರ ಕ್ಷೇತ್ರದಿಂದಲೇ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಐದು ಲಕ್ಷ ಜನರನ್ನ ಸೇರಿಸಿ ಭಾರೀ ಸಮಾವೇಶ ನಡೆಸಲು ಕಾಂಗ್ರೆಸ್ ತಯಾರಿ ನಡೆಸಿದ್ದು, ಅಂದೇ ಸಿದ್ದು ಕೋಲಾರ ಸ್ಪರ್ಧೆ ಬಗ್ಗೆಯೂ ಘೋಷಣೆ ಸಾಧ್ಯತೆಯಿದೆ.