Monday, December 23, 2024

ಮುಂದಿನ ಬಾರಿ ಕನ್ನಡದಲ್ಲೇ ಮಾತಾಡುತ್ತೇನೆ : ಟ್ರೋಲ್ ಗೆ ರಮ್ಯಾ ರಿಯಾಕ್ಷನ್

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ 20 ವರ್ಷ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ನಟಿ ರಮ್ಯಾ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ನಲ್ಲಿ ಕುಳಿತು ಸಾಕಷ್ಟು ವಿಚಾರಗಳ್ನು ಹಂಚಿಕೊಂಡಿದ್ದರು. ಆದರೆ, ಕಾರ್ಯಕ್ರಮದಲ್ಲಿ ರಮ್ಯಾ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

ಹೌದು, ‘ವೀಕೆಂಡ್ ವಿಥ್ ರಮೇಶ್-5’ರ ಮೊದಲ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ರಮ್ಯಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕಾರ್ಯಕ್ರಮದಲ್ಲಿ ರಮ್ಯಾ ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲೆ ಹೆಚ್ಚು ಮಾತನಾಡಿದ್ದು, ಇದಕ್ಕೆ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಇದೀಗ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಕನ್ನಡಿಗರಲ್ಲದೆ ಬೇರೆಯವರೂ ಬಂದಿದ್ದರು. ಎಲ್ಲರಿಗಾಗಿ ನಾನು ಇಂಗ್ಲಿಷ್‌ನಲ್ಲಿ ಮಾತನಾಡಿದೆ. ಮುಂದಿನ ಬಾರಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ರಮ್ಯಾ

ನಟಿ ರಮ್ಯಾ ಇಡೀ ಕಾರ್ಯಕ್ರಮದಲ್ಲಿ ರಮ್ಯಾ ಕನ್ನಡ ಮಾತನಾಡಿದ್ದು ಬಹಳ ಕಡಿಮೆ. ಇದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೆಯಲ್ಲದೆ ಜೀ ವಾಹಿನಿ ಬ್ಯುಸಿನೆಸೆ ಹೆಡ್ ರಾಘವೇಂದ್ರ ಹುಣಸೂರು ವಿರುದ್ಧವೂ ನೆಟ್ಟಿಗರು ಕಿಡಿಕಾರಿದ್ದರು.

‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮ ಈಗ ಹಾಲಿವುಡ್ ತಲುಪಿದೆಯೇ? ಹಾಲಿವುಡ್ ನಟಿ ರಮ್ಯಾ ಅವರ ಇಂಗ್ಲಿಷ್ ಕೇಳೋಕೆ ಚಂದ, ಆದರೂ, ಅಲ್ಲಲ್ಲಿ ಕನ್ನಡ ಬಳಸಿರುವುದು ಕನ್ನಡಿಗರು ಹೆಮ್ಮೆ ಪಡುವ ಸಂಗತಿಯೇ ಸರಿ. ನಾನಂತೂ ಜೀ ಇಂಗ್ಲಿಷ್ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡ್ತಾ ಇದ್ದೀನಿ.. ನೀವು..?’ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದರು.

ಇನ್ನೂ ಹಲವರು, ‘ರಮೇಶ್ ಸರ್ ನೀವಾದ್ರೂ ಬಂದವರಿಗೆ ಕನ್ನಡ ಹೇಳಿಕೊಡಿ. ರಾಘವೇಂದ್ರ ಹುಣಸೂರ್ ಅವರೇ ದಯವಿಟ್ಟು ಪ್ರೋಗ್ರಾಂ ನಿಲ್ಲಿಸಿ, ಇಲ್ಲಂದ್ರೆ ಕನ್ನಡ ದಲ್ಲಿ ಮಾತಾಡಿಸಿ’ ಎಂದು ಕಾಮೆಂಟ್ ಹರಿಬಿಟ್ಟಿದ್ದರು.

RELATED ARTICLES

Related Articles

TRENDING ARTICLES