ಬೆಂಗಳೂರು : ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ರಾಜ್ಯದ 19 ಭ್ರಷ್ಟ ಶಾಸಕರ ಲಂಚೋತ್ಸವವನ್ನು ಪವರ್ ಟಿವಿ ರಾಜ್ಯದ ಜನತೆಯ ಮುಂದೆ ಬಯಲಿಗೆಳೆದಿತ್ತು. ಇದೀಗ ಪವರ್ ಬೇಟೆಯಿಂದ ಬಣ್ಣ ಕಳಚಿಕೊಂಡಿರುವ ಶಾಸಕರಿಗೆ ಲಂಚಾ ಪುರಾಣದ ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದೆ!
ಹೌದು, ನಿವೃತ್ತ ಪೊಲೀಸ್ ಅಧೀಕ್ಷಕರರೊಬ್ಬರು ಲೋಕಾಯುಕ್ತ, ಮುಖ್ಯ ಚುನಾವಣಾ ಆಯೋಗಕ್ಕೆ ಶಾಸಕರ ಲಂಚೋತ್ಸವ ಕುರಿತು ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಈ ಮೇಲ್ ಮೂಲಕ ದೂರು ನೀಡಿದ್ದಾರೆ. ನಿವೃತ್ತ ಎಸ್.ಪಿ. ಕುಮಾರಸ್ವಾಮಿ ದೂರು ನೀಡಿದ್ದಾರೆ. ಎಂಎಲ್ಎಗಳ ವಿರುದ್ದ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಮೂಲಕ ಆ ಭ್ರಷ್ಟ ಶಾಸಕರಿಗೆ ತನಿಖೆಯ ಭೀತಿ ಎದುರಾಗಿದೆ.
ಪವರ್ ಟಿವಿ ಸ್ಟಿಂಗ್ ಆಪರೇಶನಲ್ ಗೆ ಇಡೀ ಸರ್ಕಾರ ಮಾತ್ರವಲ್ಲದೆ ವಿಪಕ್ಷ ನಾಯಕರೆಲ್ಲಾ ಶೇಕ್ ಆಗಿದ್ದಾರೆ. ಪವರ್ ಟಿವಿ ಮಾಧ್ಯಮ ಇತಿಹಾಸದಲ್ಲೇ ನಡೆಸಿದ ಅತಿದೊಡ್ಡ ಸ್ಟಿಂಗ್ ಆಪರೇಷನ್ಗೆ ರಾಜ್ಯದ ಜನತೆ ಶಹಬ್ಬಾಸ್ಗಿರಿ ಹೇಳಿದ್ದಾರೆ.
ಪವರ್ ಫುಲ್ ಕಾರ್ಯಾಚರಣೆಗೆ ಸಲಾಂ
ಮಾಧ್ಯಮ ಇತಿಹಾಸದಲ್ಲೇ ಪವರ್ ಟಿವಿ 19 ಶಾಸಕರ ಭ್ರಷ್ಟಾಚಾರ ಮುಖವಾಡ ಕಳಚಿದೆ. ಓಎಫ್ ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಮೆಗಾ ಡೀಲ್ ಬಟಾ ಬಯಲು ಮಾಡಿದೆ. ರಾಜ್ಯದಲ್ಲಿ ಪವರ್ ಟಿವಿ ಕುಟುಕು ಕಾರ್ಯಾಚರಣೆ ಸಂಚಲನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ‘ಪವರ್’ ಫುಲ್ ಕಾರ್ಯಾಚರಣೆಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ತಪ್ಪಿದ್ರೆ ಶಿಸ್ತು ಕ್ರಮದ ಭರವಸೆ
ಇನ್ನೂ ಪವರ್ ಟಿವಿಯ ಸ್ಟಿಂಗ್ ವಿಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಮಾನ್ವಿ ಶಾಸಕ ರಾಜ ವೆಂಕಟಪ್ಪ ನಾಯಕ ಅಕ್ರಮ ಬಯಲಾಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಅವರಿಗೆ ಸ್ಪಷ್ಟನೆಯನ್ನು ಕೇಳುತ್ತೇನೆ. ತಪ್ಪಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.