ಬೆಂಗಳೂರು : ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಆಗಾಗ ಬದಲಾವಣೆ ತರುತ್ತಿದ್ದಾರೆ.
ಹೌದು, ಎಲಾನ್ ಮಸ್ಕ್ ಇದೀಗ ಮತ್ತೊಂದು ಬದಲಾವಣೆ ಬಗ್ಗೆ ಘೋಷಿಸಿದ್ದಾರೆ. ಟ್ವಿಟರ್ ಬಳಕೆದಾರರಿಗೆ ಏಪ್ರಿಲ್ 15ರಿಂದ ಮತ್ತೊಂದು ಮಹತ್ವದ ಬದಲಾವಣೆ ತರುತ್ತಿರುವುದಾಗಿ ಎಲಾನ್ ಮಸ್ಕ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿದ ಅವರು ‘ಫಾರ್ ಯೂ’ ಪೇಜ್ ಏಪ್ರಿಲ್ 15ರಿಂದ ವೆರಿಫೈಡ್ ಖಾತೆಗಳನ್ನು ಮಾತ್ರ ಹೊಂದಿರುತ್ತದೆ. ಲೆಗಸಿ ವೆರಿಫಿಕೇಷನ್ ಹೊಂದಿರುವ ಎಲ್ಲ ಯೂಸರ್ ಮುಂದಿನ ತಿಂಗಳು ತಮ್ಮ ಬ್ಯಾಡ್ಜ್ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ತಿಂಗಳಿಗೆ 8 ಡಾಲರ್‌ಗೆ ಟ್ವಿಟರ್ ಬ್ಲೂ ನೋಂದಾಯಿಸಿಕೊಳ್ಳುವವರು ಮಾತ್ರ ತಮ್ಮ ಬ್ಲೂಟಿಕ್ ಉಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
Starting April 15th, only verified accounts will be eligible to be in For You recommendations.
The is the only realistic way to address advanced AI bot swarms taking over. It is otherwise a hopeless losing battle.
Voting in polls will require verification for same reason.
— Elon Musk (@elonmusk) March 27, 2023
ಅಕ್ಷರಗಳ ಮಿತಿಯನ್ನು ನಿಗದಿ
ಪ್ರಸ್ತುತ ಟ್ವಿಟರ್ 280 ಅಕ್ಷರಗಳಲ್ಲಿ ಪೋಸ್ಟ್ ಮಾಡಲು ಅನುಮತಿಸುತ್ತದೆ. ಟ್ವಿಟರ್ ಪ್ರಾರಂಭದ ಸಮಯದಲ್ಲಿ, ಒಂದು ಟ್ವೀಟ್‌ಗೆ 140 ಅಕ್ಷರಗಳ ಮಿತಿಯನ್ನು ನಿಗದಿಪಡಿಸಿತ್ತು. ಬಳಿಕ, ಅದನ್ನು 280 ಅಕ್ಷರಗಳಿಗೆ ಹೆಚ್ಚಿಸಿತು. ಅಂದಿನಿಂದ 280 ಅಕ್ಷರಗಳ ಮಿತಿಯು ಈವರೆಗೆ ಚಾಲನೆಯಲ್ಲಿದೆ. ಇದನ್ನು ಬದಲಾಯಿಸುವ ಯೋಜನೆ ಮಾಡಲಾಗಿದೆ.