ಬೆಂಗಳೂರು : ಏಪ್ರಿಲ್ ತಿಂಗಳು ಆರಂಭವಾಗುವ ಸಮಯ ಬಂದಿದೆ. ಬೇಸಿಗೆ ಆರಂಭವಾಗಿದೆ, ಶಾಲಾ ಕಾಲೇಜುಗಳಿಗೆ ರಜೆ ಸಿಗುತ್ತಿದೆ. ಇದರ ಜೊತೆಯಲ್ಲೇ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಿಕ್ಕಾಪಟ್ಟೆ ರಜೆಗಳಿವೆ.
ಹೌದು, ಆರ್.ಬಿ.ಐ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಬರೋಬ್ಬರಿ 11 ರಜೆ ಸಿಗುತ್ತದೆ. 30 ದಿನಗಳಲ್ಲಿ 11 ರಜೆ ಕಳೆದರೆ, 19 ದಿನ ಮಾತ್ರ ಬ್ಯಾಂಕ್ ಕೆಲಸಗಳು ನಡೆಯಲಿವೆ.
ಉದ್ಯಮಿಗಳು ಹಾಗೂ ಸಾರ್ವಜನಿಕರು ಬ್ಯಾಂಕ್ ಸಂಬಂಧಿಸಿದ ಕೆಲಸಗಳು ಆದಷ್ಟು ಬೇಗ ಮುಗಿಸಿಕೊಳ್ಳುವುದು ಸೂಕ್ತ. ಇನ್ನೂ, ಹಲವು ಶಾಲೆಗಳಿಗೆ ಈ ವೇಳೆಗೆ ರಜೆ ಸಿಗಲಿದ್ದು, ಈ ರಜೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳೊಂದಿಗೆ ಫ್ಯಾಮಿಲಿ ಟ್ರಿಪ್ ಕೈಗೊಳ್ಳಲು ಪೋಷಕರು ಯೋಜನೆ ರೂಪಿಸಬಹುದು.
ಹೀಗಿದೆ ರಜೆಗಳ ದಿನಾಂಕ
- ಏಪ್ರಿಲ್ 1 – ಈಯರ್ ಲೀ ಕ್ಲೋಸಿಂಗ್ ಡೇ
- ಏಪ್ರಿಲ್ 2 – ಭಾನುವಾರ
- ಏಪ್ರಿಲ್ 4 – ಮಹಾವೀರ ಜಯಂತಿ
- ಏಪ್ರಿಲ್ 7 – ಗುಡ್ ಫ್ರೈ ಡೇ
- ಏಪ್ರಿಲ್ 8 – ಎರಡನೇ ಶನಿವಾರ
- ಏಪ್ರಿಲ್ 9 – ಭಾನುವಾರ
- ಏಪ್ರಿಲ್ 14 – ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ
- ಏಪ್ರಿಲ್ 16 – ಭಾನುವಾರ
- ಏಪ್ರಿಲ್ 22 – ನಾಲ್ಕನೇ ಶನಿವಾರ
- ಏಪ್ರಿಲ್ 23 – ಭಾನುವಾರ
- ಏಪ್ರಿಲ್ 30 – ಭಾನುವಾರ