Monday, December 23, 2024

ನಟ ಅಂಬರೀಶ್ ಪ್ರತಿಮೆ ವಿಶೇಷತೆಗಳೇನು?

ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕ ಲೋಕಾರ್ಪಣೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನ ಆನಂದರಾವ್ ವೃತ್ತದಿಂದ ಆರ್.ಸಿ ಕಾಲೇಜ್ ವರೆಗಿನ(ರೇಸ್ ಕೋರ್ಸ್ ರಸ್ತೆ) ರಸ್ತೆಗೆ ನಟ ಅಂಬರೀಶ್ ಅವರ ಹೆಸರನ್ನು ಇಂದು ನಾಮಕರಣ ಮಾಡಲಾಗುತ್ತದೆ.

ಹೌದು, ನಟ ಅಂಬರೀಶ್ ಅವರ ಅಭಿಮಾನಿಗಳ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಸಂಜೆ 6.30ಕ್ಕೆ ಅಂಬರೀಶ್ ಅವರ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಿರೋ ಅಂಬರೀಶ್ ಪ್ರತಿಮೆ ಹಾಗೂ ಪ್ರತಿಷ್ಠಾನ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಮಂಡ್ಯ ಸಂಸದೆ ಹಾಗೂ ಅಂಬರೀಶ್ ಪತ್ನಿ ಸುಮಲತಾ, ಸಂಸದ ಡಿ.ವಿ ಸದಾನಂದಗೌಡ, ನಟ ಅಭಿಷೇಕ್ ಅಂಬರೀಶ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಅಂಬರೀಸ್ ಪ್ರತಿಮೆ ವಿಶೇಷತೆ

  • ಸುಮಾರು 12 ಕೋಟಿ ಮೊತ್ತದಲ್ಲಿ ಸ್ಮಾರಕ ನಿರ್ಮಾಣ
  • ಒಟ್ಟು 1.34ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಸ್ಮಾರಕ
  • 3 ಟನ್ ತೂಕದ ಡಾ.ಅಂಬರೀಶ್ ಕಂಚಿನ ಪುತ್ಥಳಿ ಅನಾವರಣ
  • ಸಮಾಧಿ ಸ್ಥಳದಲ್ಲಿ 43 ಅಡಿ ಎತ್ತರದಲ್ಲಿ ನಮಸ್ತೆ ಆಕಾರ ರಚನೆ
  • ಸ್ಮಾರಕದ ಸುತ್ತ ನೀರಿನ ಕಾರಂಜಿ
  • ಸ್ಮಾರಕವು ಮ್ಯೂಸಿಯಂ, ಆ್ಯಂಫಿಥಿಯೇಟರ್, ನೀರಿನ ಕಾರಂಜಿಗಳು

RELATED ARTICLES

Related Articles

TRENDING ARTICLES