Sunday, December 22, 2024

ಪವರ್ ಬೇಟೆ ನಂ.12 : ಲಂಚ ಪಡೆದು ‘ಶರ್ಟ್ ಬಿಚ್ಚಿ’ದ ಕಾಂಗ್ರೆಸ್ ಶಾಸಕ

ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 12 ಶಾಸಕ ತುಂಬಾನೇ ಮಚವಾದ ವ್ಯಕ್ತಿ. ಶರ್ಟ್ ಬಟನ್ ಬಿಚ್ಚಿ ಬಿಂದಾಸ್ ಆಗಿಯೇ ಲಂಚದ ಬಗ್ಗೆ ಮಾತನಾಡಿರು ಈ ಆಸಾಮಿ, ನೇರಾ ನೇರವಾಗಿ ಡೀಲ್ ಕುದುರಿಸಿದ್ದಾರೆ.

ಹೌದು, ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಒಂದೂವರೆ ಲಂಚ ರೂಪಾಯಿಗೆ ಭೇಡಿಕೆ ಇಟ್ಟಿದ್ದು, ಒಮದು ಲಕ್ಷ ರೂಪಾಯಿ ಕಮಾಯ್ ಮಾಡಿದ್ದಾರೆ.

ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಡೀಲ್​​​​​ ಮಾತುಕತೆ ವೇಳೆ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಪವರ್ ಟಿವಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಒಂದೂವರೆ ಲಕ್ಷ ರೂ.ಗೆ ಬೇಡಿಕೆ

ಬೆಂಗಳೂರಿನ ಶಾಸಕರ ಭವನದಲ್ಲಿ ಎಸ್​​.ರಾಮಪ್ಪ ನೇರ ನೇರಾವಾಗಿ ಡೀಲ್ ಮಾಡಿದ್ದಾರೆ​.  ಬಿಂದಾಸ್ ಆಗಿ ಲಂಚದ ಬಗ್ಗೆ ಮಾತನಾಡುತ್ತಾ, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ `ಪವರ್’ ತಂಡದ ಜೊತೆ ಒಂದೂವರೆ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.

ಒಂದೂವರೆ ಲಕ್ಷಕ್ಕೆ ಒಕ್ಕೆ ಎನ್ನದಿದ್ರೆ ಬಿಲ್​ಕುಲ್​​ ಕೆಲಸ ಆಗಲ್ಲ ಅಂತಾ ತಗಾದೆ ತಗೆದಿದ್ದಾರೆ. ಕೊನೆಗೆ ಚೌಕಾಶಿ ಮಾಡಿ ಪ್ರತೀ ಕಿಲೋಮೀಟರ್​​​ಗೆ 1 ಲಕ್ಷ ರೂಪಾಯಿಗೆ ಪವರ್ ಟಿವಿ ತಂಡ ಶಾಸಕರನ್ನು ಒಪ್ಪಿಸಿದೆ. ರಿಲ್ಯಾಕ್ಸ್ ಆಗಿ ಅಡ್ವಾನ್ಸ್ ಲಂಚದ ಹಣವಾಗಿ 1 ಲಕ್ಷ ಸ್ವೀಕರಿಸುವ ಶಾಸಕ ಎಸ್​.ರಾಮಪ್ಪ ಲಂಚೋತ್ಸವ ಬಟಾ ಬಯಲಾಗಿದೆ.

ಹೆಸರು : ಎಸ್​​​​​​.ರಾಮಪ್ಪ

ಕ್ಷೇತ್ರ: ಹರಿಹರ ವಿಧಾನಸಭಾ ಕ್ಷೇತ್ರ

ಪಕ್ಷ : ಕಾಂಗ್ರೆಸ್

ಜಿಲ್ಲೆ: ದಾವಣಗೆರೆ

ಸ್ಥಳ: ಶಾಸಕರ ಭವನ, ಬೆಂಗಳೂರು

RELATED ARTICLES

Related Articles

TRENDING ARTICLES