Sunday, December 22, 2024

ಪವರ್ ಬೇಟೆ ನಂ.13 : 20 ಲಕ್ಷಕ್ಕೆ ಬೇಡಿಕೆಯಿಟ್ಟ ನಾಗಣ್ಣ, ಪಿಎ ಮೂಲಕ 2 ಲಕ್ಷ ಕಮಾಯ್

ಬೆಂಗಳೂರು : ಶಾಸಕರ ಅಡ್ಡಾಗೇ ಭೇಟಿ ಕೊಡುವ ಪವರ್​​​ ಟಿವಿ ಸ್ಟಿಂಗ್ ಆಪರೇಷನ್ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 13ನೇ ಬೇಟೆ ಕಾಂಗ್ರೆಸ್ ಶಾಸಕ.

ಹೌದು, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಲಂಚಾವತಾರ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಯಲಾಗಿದೆ. ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 20 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಫೈನಲ್ ಆಗಿ ಪ್ರತೀ ಕಿಲೋಮೀಟರ್​​​​​ಗೆ ತಲಾ ಎರಡು ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆ.

ಪವರ್​​​ ಟಿವಿ ಸ್ಟಿಂಗ್ ಆಪರೇಷನ್ ತಂಡ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರ ಮನೆಗೇ ಭೇಟಿ ನೀಡಿತ್ತು. ನಮ್ಮ ತಂಡದ ಜೊತೆ ಬಳ್ಳಾರಿಯಲ್ಲಿರುವ ನಿವಾಸದಲ್ಲಿಯೇ ಶಾಸಕ ನಾಗೇಂದ್ರ ಡೀಲ್ ಮಾತುಕತೆ ನಡೆಸಿದ್ದರು. ಓಎಫ್​ಸಿ ಕೇಬಲ್ ಅಳವಡಿಕೆಗೆ 20 ಲಕ್ಷ ರೂಪಾಯಿಗೆ ಶಾಸಕರು ಬೇಡಿಕೆ ಇಟ್ಟಿದ್ದರು.

2 ಲಕ್ಷ ಜೇಬಿಗಿಳಿಸಿದ ನಾಗಣ್ಣ

ಪ್ರತೀ ಕಿಲೋಮೀಟರ್​​​​​ಗೆ ತಲಾ ಎರಡು ಲಕ್ಷ ರೂಪಾಯಿ ಲಂಚಕ್ಕೆ ಶಾಸಕ ನಾಗೇಂದ್ರ ಒಪ್ಪಿಗೆ ಸೂಚಿಸಿದ್ದರು. ಬಳಿಕ, ಎರಡು ಲಕ್ಷ ರೂಪಾಯಿ ಅಡ್ವಾನ್ಸ್​​ ಪಡೆದರು. ಪಿಎ ಮೂಲಕ 2 ಲಕ್ಷ ರೂಪಾಯಿ ಪಡೆದುಕೊಳ್ಳುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರರ ಲಂಚ ಪುರಾಣ ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆಸರು: ನಾಗೇಂದ್ರ

ಕ್ಷೇತ್ರ: ಬಳ್ಳಾರಿ ಗ್ರಾಮಾಂತರ

ಪಕ್ಷ : ಕಾಂಗ್ರೆಸ್

ಜಿಲ್ಲೆ: ಬಳ್ಳಾರಿ

ಸ್ಥಳ: ಶಾಸಕರ ನಿವಾಸ, ಬಳ್ಳಾರಿ

RELATED ARTICLES

Related Articles

TRENDING ARTICLES