Monday, December 23, 2024

ಪವರ್ ಬೇಟೆ ನಂ.19: ಹುಣಸೂರು ‘ಮಂಜುನಾಥ’ನ ಲಂಚೊತ್ಸವ ‘ದರ್ಶನ’

ಬೆಂಗಳೂರು : ಹಳೇ ಮೈಸೂರು ಭಾಗದ ಶಾಸಕರು ಕೂಡ ಲಂಚ ಪಡೆಯೋದ್ರಲ್ಲಿ ಹಿಂದೆಬಿದ್ದಿಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಪವರ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ದೇವರ ಹೆಸರನ್ನೇ ತನ್ನ ನಾಮಧ್ಯೇಯವಾಗಿಟ್ಟುಕೊಂಡಿರುವ ಎಚ್.ಪಿ ಮಂಜುನಾಥ್ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಸೆರೆಯಾಗಿದೆ.

ಹೌದು, ಅರಮನೆನಗರಿ ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 19ನೇ ಶಾಸಕ.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪ್ರತೀ ಕಿಲೋಮೀಟರ್​ಗೆ ಒಂದೂವರೆ ಲಕ್ಷ ರೂಪಾಯಿ ಲಂಚ ನೀಡುವಂತೆ ಪವರ್ ಟಿವಿ ತಂಡದ ಪ್ರತಿನಿಧಿ ಬಳಿ ಬೇಡಿಕೆ ಇಟ್ಟಿದ್ದಾರೆ. ಹುಸಣುಸೂರು ಪಟ್ಟಣದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆಗೆ ಶಾಸಕರು ಡೀಲ್ ಕುದುರಿಸಿದ್ದಾರೆ.

ಪ್ರತೀ ಕಿಲೋಮೀಟರ್​ಗೆ ಒಂದೂವರೆ ಲಕ್ಷ ನಿಡಲೇಬೇಕು ಎಂದು ಮಂಜುನಾಥ್ ಪಟ್ಟು ಹಿಡಿದಿದ್ದಾರೆ. ಒಟ್ಟು ಮೂರು ಕಿಲೋಮೀಟರ್​​ ಹಣವಾದ ನಾಲ್ಕೂವರೆ ಲಕ್ಷ ಈಗಲೇ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ರೂಪಾಯಿಯನ್ನು ನೇರವಾಗಿ ಸ್ವೀಕರಿಸುವಾಗ ಶಾಸಕ ಮಂಜುನಾಥ್ ಭ್ರಷ್ಟಾಚಾರ ಪವರ್ ಟಿವಿ ಕ್ಯಾಮೆರಾ ಮುಂದೆ ಬಟಾ ಬಯಲಾಗಿದೆ.

ಲಂಚ ಪಡೆಯೋದ್ರಲ್ಲಿ ಖಡಕ್​

ಹುಣಸೂರು ಶಾಸಕ ಮಂಜುನಾಥ್​​​​​​​ ಲಂಚ ಪಡೆಯೋದ್ರಲ್ಲಿ ತುಂಬಾನೇ ಖಡಕ್. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕರ ಮನೆಯಲ್ಲಿ ಈ ಡೀಲ್ ನಡೆದಿತ್ತು. ಪ್ರತೀ ಕಿಲೋಮೀಟರ್​ಗೆ ಒಂದೂವರೆ ಲಕ್ಷ ರೂ. ಮೂರು ಕಿಲೋಮೀಟರ್​​ ನಾಲ್ಕೂವರೆ ಲಕ್ಷ ರೂ. ಈಗಲೇ ಕೊಡಿ ಅಂತಾ ಒತ್ತಾಯ ಮಾಡಿದ್ದಾರೆ. ಪವರ್​​​​​ ಟಿವಿ ತಂಡ ಹರಸಾಹಸ ಪಟ್ಟು ಅಡ್ವಾನ್ಸ್​​​ಗೆ ಮಾತ್ರ ಒಪ್ಪಿಸಿತ್ತು. ಒಂದೂವರೆ ಲಕ್ಷ ರೂಪಾಯಿ ಹಣವನ್ನು ಅಡ್ವಾನ್ಸ್ ಮಂಜುನಾಥ್ ಸ್ವೀಕರಿಸಿದ್ದಾರೆ.​​​

ಹೆಸೆರು: ಮಂಜುನಾಥ್

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಹುಣಸೂರು

ಜಿಲ್ಲೆ: ಮೈಸೂರು

ಸ್ಥಳ: ಶಾಸಕರ ನಿವಾಸ, ಡಾಲರ್ಸ್ ಕಾಲೋನಿ, ಬೆಂಗಳೂರು

RELATED ARTICLES

Related Articles

TRENDING ARTICLES