Wednesday, January 22, 2025

ಪವರ್ ಬೇಟೆ ನಂ.18: ಅಖಂಡ ‘ಶ್ರೀನಿವಾಸ’ನ ಹುಂಡಿಗೆ ಬಿದ್ದ ಲಂಚ ಎಷ್ಟು?

ಬೆಂಗಳೂರು : ಭ್ರಷ್ಟಾಚಾರಲ್ಲಿ ಬೆಂಗಳೂರು ನಗರ ಎಂಎಲ್ಎಗಳು ಯಾರಿಗಿಂತ ಹಿಂದೆ ಬಿದ್ದಿಲ್ಲ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

ಹೌದು, ಬೆಂಗಳೂರು ನಗರ ವ್ಯಾಪ್ತಿಯ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ಅಖಂಡ ಶ್ರೀನಿವಾಸಮೂರ್ತಿ ಲಂಚ ಪುರಾಣ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 18ನೇ ಶಾಸಕ ಇವರೇ. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಬ್ಯುಸಿನೆಸ್ ಗೆ ಇಳಿದ ಶ್ರೀನಿವಾಸನ ಅವತಾರವನ್ನು ಪವರ್ ಟಿವಿ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದೆ.

ಭ್ರಷ್ಟಾಚಾರದಲ್ಲಿ ಇತರೆ ಭಾಗದ ಶಾಸಕರುಗಳಂತೆ ಅಖಂಡ ಶ್ರೀನಿವಾಸಮೂರ್ತಿ ಸ್ಟ್ರಿಕ್ಟ್ ಅಂಡ್ ಬೋಲ್ಡ್. ಪವರ್ ಟಿವಿ ರಹಸ್ಯ ಕಾರ್ಯಾಚರಣೆ ತಂಡ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಜೊತೆಗೆ ಡೀಲ್ ಮಾತುಕತೆ ನಡೆಸಿತ್ತು. ಬೆಂಗಳೂರಿನ ಶಾಸಕರ ಭವನದ ಕೊಠಡಿಯಲ್ಲಿ ಲಂಚದ ಕುರಿತು ಶಾಸಕರ ಜೊತೆಗೆ ಡೀಲ್ ನಡೆಸಿತ್ತು.

2 ಲಕ್ಷ ರೂ.ಗೆ ಡೀಲ್ ಒಕೆ

ಪುಲಕೇಶಿ ನಗರದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬರೋಬ್ಬರಿ 5 ಲಕ್ಷ ರೂಪಾಯಿ ಡಿಮ್ಯಾಂಡ್​​ ಮಾಡಿದ್ದರು. ಫೈನಲ್ ಆಗಿ ಪ್ರತೀ ಕಿಲೋಮೀಟರ್​ಗೆ 2 ಲಕ್ಷ ರೂಪಾಯಿ ನೀಡುವಂತೆ ಅಖಂಡ ಶ್ರೀನಿವಾಸಮೂರ್ತಿ ಒಕೆ ಎಂದಿದ್ದರು. ಅಲ್ಲದೆ, ಅಡ್ವಾನ್ಸ್ ಆಗಿ ಕ್ಷೇತ್ರದ ಮುಖಂಡನ ಮೂಲಕ 2 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆದಿದ್ದಾರೆ.

ಹೆಸರು: ಅಖಂಡ ಶ್ರೀನಿವಾಸಮೂರ್ತಿ

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಪುಲಕೇಶಿ ನಗರ

ಜಿಲ್ಲೆ: ಬೆಂಗಳೂರು ನಗರ

ಸ್ಥಳ: ಶಾಸಕರ ಭವನ, ಬೆಂಗಳೂರು

RELATED ARTICLES

Related Articles

TRENDING ARTICLES