Sunday, January 19, 2025

ಬೊಮ್ಮಾಯಿ ಮಹಾಭಾರತ ‘ಶಕುನಿ’ ಇದ್ದಂತೆ : ಸುರ್ಜೇವಾಲ ಲೇವಡಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸುರ್ಜೇವಾಲಾ, ಬಸವರಾಜ್ ಬೊಮ್ಮಾಯಿ ಮಹಾಭಾರತದಲ್ಲಿ ಬರುವ ಶಕುನಿಯಂತೆ, ಕೊನೆಗೆ ಪಾಂಡವರೇ ಗೆಲ್ಲೋದು, ಬೊಮ್ಮಾಯಿ ಸರ್ಕಾರ 420 ಸರ್ಕಾರ ಎಂದು ಲೇವಡಿ ಮಾಡಿದ್ದಾರೆ.

ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತರಿಗೆ ಮೋಸ ಮಾಡಿರುವ ಬಿಜೆಪಿ, ಈಗ ಚುನಾವಣೆ ಹೊತ್ತಿನಲ್ಲಿ ಮೀಸಲಾತಿ ಘೋಷಣೆ ಮಾಡಿ ನಾಟಕ ಮಾಡುತ್ತಿದೆ. ಒಬ್ಬರ ಮೀಸಲಾತಿ ಕಿತ್ತುಕೊಂಡು ಮತ್ತೊಬ್ಬರಿಗೆ ಕೊಟ್ಟು ಸಾಮಾಜಿಕ ನ್ಯಾಯವನ್ನೇ ಬೊಮ್ಮಾಯಿ ಮತ್ತು ಸರ್ಕಾರ ಮರೆತಿದೆ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

ಒಕ್ಕಲಿಗರು, ಲಿಂಗಾಯುತರೇನು ಬಿಕ್ಷುಕರೇ..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ​,  ಒಕ್ಕಲಿಗರು ಹಾಗೂ ಲಿಂಗಾಯುತರೇನು ಬಿಕ್ಷುಕರೇನ್ರಿ? ಅಲ್ಪಸಂಖ್ಯಾತರದ್ದು ಯಾಕೆ ಕಿತ್ಕೊಂಡು ಒಕ್ಕಲಿಗರಿಗೆ, ಲಿಂಗಾಯತರಿಗೆ ಕೊಡ್ತೀರಾ? ಈ ಮೂಲಕ ಸಮುದಾಯಗಳ ನಡುವೆ ತಂದಿಕ್ತೀರಾ  ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಶಾಂತಿ ತೋಟವನ್ನು ಕದಡಿಸ್ತಿದ್ದೀರಾ, ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ, ನಾವೂ ಅಧಿಕಾರಕ್ಕೆ ಬರುತ್ತವೇ ಇದನ್ನೆಲ್ಲ ರದ್ದು ಮಾಡಿ ಸಮಾನವಾದ ನ್ಯಾಯವನ್ನ ಎಲ್ಲಾ ಸಮುದಾಯಗಳಿಗೂ ಕೊಡ್ತೀವಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES