Sunday, January 19, 2025

ಗೂಂಡಾನನ್ನು ಸಿಎಂ ಮಾಡಿದ್ರೆ ನಾವು ಸಾಯ್ತೀವಿ : ಡಿಕೆಶಿಗೆ ಯತ್ನಾಳ್ ಟಾಂಗ್

ಬೆಂಗಳೂರು : ನಾಳೆ ಗೂಂಡಾನನ್ನು ಮುಖ್ಯಮಂತ್ರಿ ಮಾಡಿದ್ರೆ, ನಾವು-ನೀವು ಸೇರಿಯೇ ಸಾಯ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲ್ಲ. ಐದು ವರ್ಷ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ​ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯರನ್ನು ಬಲಿಪಶು ಮಾಡಲಿದ್ದಾರೆ. ಸಿದ್ದರಾಮಯ್ಯ ಅವರ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬಾರದು. ಅತಿಯಾದ ಮುಸ್ಲಿಂ ತುಷ್ಟೀಕರಣ ಸಿದ್ದರಾಮಯ್ಯರ ಈ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸಿದ್ದುಗೆ ಹಳೇ ಗಂಡನ ಪಾದವೇ ಗತಿ : ಪ್ರತಾಪ್ ಸಿಂಹ

ಮುಸ್ಲಿಮರನ್ನು ತಲೆ ಮೇಲೆ ಕೂರಿಸಿಕೊಂಡ್ರೆ..

ದ್ದರಾಮಯ್ಯ ಅವರು ಒನ್ ಸೈಡ್ ಹೋಗಿದ್ದಾರೆ. ಎಲ್ಲಾ ಜನಾಂಗಗಳನ್ನ ಪ್ರೀತಿ ಮಾಡಬೇಕು. ಒಂದೇ ಜನಾಂಗವನ್ನು ತಲೆ ಮೇಲೆ ಕೂರಿಸಿಕೊಂಡ್ರೆ, ಉಳಿದವರು ಬುದ್ದಿ ಕಲಿಸುತ್ತಾರೆ. ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಸುಲಭ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊದಲು ಜನ ಮುಗ್ದರಿದ್ದರು.ಮತ ಹಾಕುತ್ತಿದ್ದರು. ಈಗ ಯಾರು ಏನು ಮಾಡಿದ್ದಾರೆ ಅನ್ನೋ ಲಿಸ್ಟ್ ಜನರ ಬಳಿ ಇದೆ. ರಾಜ್ಯದ ಜನರ ಮುಂದೆ ಕಾಂಗ್ರೆಸ್ ನಾಯಕರ ಆಟ ನಡೆಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES