ಬೆಂಗಳೂರು : ಜೆಡಿಎಸ್ ಪಂಚರತ್ನ ಯಾತ್ರೆ ಅದ್ಧೂರಿ ಸಮಾರೋಪ ಸಮಾರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ಸಮಾರಂಭ ಆಯೋಜನೆ ಮಾಡಿದ್ದು, ಸಂಜೆ 4 ಗಂಟೆಗೆ ಸಮಾರಂಭ ಆರಂಭವಾಗಲಿದೆ.
ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದೆ. ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಭಾಗಿಯಾಗುವ ಸಾಧ್ಯತೆಯಿದೆ. ಎಲ್ಲರಿಗೂ ಭರ್ಜರಿ ಭೋಜನ, ಬೃಹತ್ ವೇದಿಕೆ, ಸೂಕ್ತ ಆಸನದ ವ್ಯವಸ್ಥೆ ಮಾಡಲಾಗಿದೆ.
ಎಚ್ ಡಿಡಿ ಸೇರಿ ಗಣ್ಯರ ಭಾಗಿ
ಸಮಾರೋಪ ಸಮಾರಂಭದ ಕೇಂದ್ರ ಬಿಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ. ಅನಾರೋಗ್ಯದ ನಡುವೆ ದೇವೇಗೌಡ್ರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಆ ಮೂಲಕ ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಹೀಗಿದೆ ಊಟದ ಮೆನು
- ಬರೋಬ್ಬರಿ 7-10 ಲಕ್ಷ ಜನರಿಗೆ ಊಟದ ವ್ಯವಸ್ಥೆ
- ಟೊಮ್ಯಾಟೊ ಬಾತ್, ಮೆಂಥ್ಯ ಬಾತ್, ಕೆಸರಿ ಬಾತ್, ಹಾಗೂ ಮೈಸೂರು ಪಾಕ್
- 20 ಟನ್ ಅಕ್ಕಿ,12 ಟನ್ ಟಮೋಟೋ,700 ಟಿನ್ ಎಣ್ಣೆ, 500 ಕೆ.ಜಿ.ತುಪ್ಪ,1 ಲೋಡ್ ಮೆಂಥ್ಯ ಸೊಪ್ಪು ಬಳಸಿ ಊಟದ ವ್ಯವಸ್ಥೆ
- 2,250 ಮಂದಿ ಬಾಣಸಿಗರು ಹಾಗೂ ಅಡುಗೆ ಸಹಾಯಕರಿಂದ ಅಡುಗೆ ತಯಾರಿಕೆ.
- ಕಾರ್ಯಕರ್ತರಿಗೆ ತೊಂದರೆಯಾಗದಂತೆ ಕೌಂಟರ್ ವ್ಯವಸ್ಥೆ
- ಸುಮಾರು 170 ಕೌಂಟರ್ ನಲ್ಲಿ ಊಟದ ವ್ಯವಸ್ಥೆ
ಪಂಚರತ್ನ ಯಾತ್ರೆ ನಡೆದು ಬಂದದ್ದು ಹೀಗೆ
- 2022 ನವೆಂಬರ್ 18ರಂದು ಪಂಚರತ್ನಯಾತ್ರೆ ಆರಂಭ
- 2023 ಮಾರ್ಚ್ 24ರಂದು ಪಂಚರತ್ನ ಯಾತ್ರೆ ಅಂತ್ಯ
- 99 ದಿನಗಳನ್ನು ಪೂರೈಸಿದ ಪಂಚರತ್ನ ರಥಯಾತ್ರೆ
- ರಾಜ್ಯದ 88 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚಾರ
- 10,000 ಕಿ.ಮೀ. ಪಂಚರತ್ನ ರಥಯಾತ್ರೆ ಸಂಚಾರ
- ರಾಜ್ಯದ 55 ಲಕ್ಷಕ್ಕೂ ಹೆಚ್ಚು ಜನರಿಗೆ ತಲುಪಿದ ಯಾತ್ರೆ
- 3 ಕೋಟಿಗೂ ಅಧಿಕ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ತಲುಪಿದೆ
- 5,500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ಕೊಟ್ಟ ಕುಮಾರಸ್ವಾಮಿ
- ದಿನದ 18 ಗಂಟೆ ಕಾಲ ಮಾಜಿ ಮುಖ್ಯಮಂತ್ರಿ ನಿರಂತರ ಪ್ರವಾಸ
- ಪಂಚರತ್ನ ಯೋಜನೆಗಳನ್ನು ಜನರಿಗೆ ಮನವರಿಕೆ
- ಕುಮಾರಸ್ವಾಮಿ ಕೊರಳು ಅಲಂಕರಿಸಿದ ಸಾವಿರಾರು ಬೃಹತ್ ಹಾರಗಳು
- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ
- ಯಾತ್ರೆಯ ಮೂಲಕ ರಾಜ್ಯದಲ್ಲಿ ಮತ್ತಷ್ಟು ಮನ್ನಣೆಗೆ ಪಡೆದ ಕುಮಾರಸ್ವಾಮಿ