ಬೆಂಗಳೂರು : ಅಲ್ಪಸಂಖ್ಯಾತರ ಮೀಸಲಾತಿ ರುದ್ದುಗೊಳಿಸಿ, ಮುಸ್ಲಿಂಮರನ್ನು EWSಗೆ ಸೇರ್ಪಡೆ ಮಾಡಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಹಾಗೂ ಲಿಂಗಾಯುತರೇನು ಬಿಕ್ಷುಕರೇನ್ರಿ? ಅಲ್ಪಸಂಖ್ಯಾತರದ್ದು ಯಾಕೆ ಕಿತ್ಕೊಂಡು ಒಕ್ಕಲಿಗರಿಗೆ, ಲಿಂಗಾಯತರಿಗೆ ಕೊಡ್ತೀರಾ? ಈ ಮೂಲಕ ಸಮುದಾಯಗಳ ನಡುವೆ ತಂದಿಕ್ತೀರಾ? ಎಂದು ಕಿಡಿಕಾರಿದ್ದಾರೆ.
ಅವನ್ಯಾರೋ ಒಬ್ಬ ಎಂ.ಪಿ(ಸಂಸದ) ಹೇಳ್ತಿದ್ನಲ್ಲ. ಪಂಚರ್ ಹಾಕೋರ್ ಅಂತ. ಪಂಚರ್ ಹಾಕಿಲ್ಲ ಅಂದ್ರೆ ಇವರ ಗಾಡಿನೇ ಓಡಲ್ಲ. ನಾವು ಅನ್ನದಾತರು. ವೀರಶೈವರು, ಒಕ್ಕಲಿಗರಿಗೆ, ಲಿಂಗಾಯತರಿಗೆ ಅನ್ನ ಕೊಡೋರು. ನಾವು ಹೊಲ ಉಳೋರು ಎಂದು ಡಿ.ಕೆ ಶಿವಕುಮಾರ್ ಫುಲ್ ಗರಂ ಆಗಿದ್ದಾರೆ.
ಇಂಥ ಭಿಕ್ಷೆ ಬಯಸಿರಲಿಲ್ಲ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎರೆಡು ದಿನದ ಹಿಂದೆ ಸರ್ಕಾರ ಪ್ರಕಟಿಸಿದ ಪರಿಷ್ಕೃತ ಮೀಸಲಾತಿ ರದ್ದುಪಡಿಸಲಾಗುತ್ತದೆ. ಪರಿಷ್ಕೃತ ಮೀಸಲಾತಿಯಲ್ಲಿ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಹಂಚಲಾಗಿದೆ. ಇಂಥ ಭಿಕ್ಷೆಯನ್ನು ಲಿಂಗಾಯತರು, ಒಕ್ಕಲಿಗರು ಬಯಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ 90 ದಿನದಲ್ಲಿ 3 ಬಾರಿ ಬದಲಾವಣೆ ಮಾಡಿದೆ. ಆಯೋಗದ ವರದಿ ಬರದೆ ಇವರೇ ಚೀಟಿ ಮೇಲೆ ಬರೆದು ಇಷ್ಟು ಅಂತ ಹಂಚಿದ್ದಾರೆ. ಕರ್ನಾಟಕದ ಶಾಂತಿ ತೋಟವನ್ನು ಕದಡಿಸ್ತಿದ್ದೀರಾ, ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಮಾನವಾದ ನ್ಯಾಯವಬನ್ನು ಎಲ್ಲಾ ಸಮುದಾಯಗಳಿಗೂ ಕೊಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.