Saturday, April 20, 2024

ನಾಳೆ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ : ಮುಂಬೈ- ಡೆಲ್ಲಿ ವೀಕ್ನೆಸ್ vs ಸ್ಟ್ರೆಂಥ್ ಏನು?

ಬೆಂಗಳೂರು : ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಲೀಗ್​ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇನ್ನು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಹಾಗೂ 3ನೇ ಸ್ಥಾನ ಪಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ ​72 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್​ಗೆ ಪ್ರವೇಶಿಸಿತು. ಇದೀಗ ನಾಳೆ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ.

ಇದನ್ನೂ ಓದಿ : ಈಜುಕೊಳದಲ್ಲಿ ಊರುಗೋಲು ಹಿಡಿದು ನಡೆದಾಡಿದ ಪಂತ್

ಮುಂಬೈ ಇಂಡಿಯನ್ಸ್ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ನಟಾಲಿ ಸಿವರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಅಮೆಲಿಯಾ ಕೆರ್, ಶಬ್ನಮ್ ಇಸ್ಮಾಯಿಲ್, ಅಮನ್ಜೋತ್ ಕೌರ್, ಹೇಲಿ ಮ್ಯಾಥ್ಯೂಸ್, ಹೀದರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಕ್ಲೋಯ್ ಟ್ರಯಾನ್, ಪ್ರಿಯಾಂಕಾ ಬಾಲಾ, ಧಾರಾ ಗುಜ್ಜಾರ್, ಸೈಕಾ ಇಶಾಕ್, ಸೋನಮ್ ಯಾದವ್, ಹುಮೈರಾ ಖಾಝಿ, ಜಿಂಟಿಮಣಿ ಕಲಿತಾ, ನೀಲಂ ಬಿಷ್ತ್

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರೊಡ್ರಿಗಸ್, ಅಲಿಸ್ ಕ್ಯಾಪ್ಸಿ, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ಮರಿಝನ್ನೆ ಕಪ್, ಟೈಟಾಸ್ ಸಾಧು, ಲಾರಾ ಹ್ಯಾರಿಸ್, ಮಿನ್ನು ಮಣಿ, ಜಸಿಯಾ ಅಖ್ತರ್, ಟಾರಾ ನೋರಿಸ್, ತನಿಯಾ ಭಾಟಿಯಾ, ಪೂನಮ್ ಯಾದವ್ , ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ, ಅಲ್ಪನಾ ಮೊಂಡಲ್, ಜೆಸ್ ಜೊನಾಸನ್

RELATED ARTICLES

Related Articles

TRENDING ARTICLES