Monday, December 23, 2024

ಮೋದಿ ದೊಡ್ಡ ಘೋಷಣೆ : ರಾಜ್ಯದಲ್ಲಿ ಡಯಾಲಿಸಿಸ್ ಉಚಿತ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟಿಸಿ ಭಾಷಣ ಮಾಡಿದ್ದಾರೆ.

ಕರ್ನಾಟಕ (ಬಿಜೆಪಿ) ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ. ರಾಜ್ಯದಲ್ಲಿ ಮೊದಲು ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಡಯಾಲಿಸಿಸ್ ದುಬಾರಿಯಾಗಿತ್ತು. ಈಗ ಅದನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ವೆಲ್ ನೆಸ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಹೈನುಗಾರಿಕೆ ಕಿಸಾನ್ ಸಮ್ಮಾನ್ ಕಾರ್ಡ್ ಮೂಲಕ ಹಣಕಾಸಿನ (ಆರ್ಥಿಕ) ಸಹಾಯ ಮಾಡಲಾಗುತ್ತದೆ. ಡಬಲ್ ಇಂಜಿನ್ ಸರ್ಕಾರ ಬಡವರಿಗಾಗಿ ಶ್ರಮಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

ಕನ್ನಡದಲ್ಲೇ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಕರ್ನಾಟಕದ ಎಲ್ಲಾ ಸಹೋದರ -ಸಹೋದರಿಯರಿಗೆ ನನ್ನ ನಮಸ್ಕಾರಗಳು. ಹೊಸ ಸಂಕಲ್ಪದೊಂದಿಗೆ ಈ ಸಮಾರಂಭದಲ್ಲಿ ನಾನು ಪಾಲ್ಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಸರ್.ಎಂ ವಿಶ್ವೇಶ್ವರಯ್ಯ ಅವರ ಪುಣ್ಯಭೂಮಿಯಾಗಿದೆ. ಈ ಪುಣ್ಯಭೂಮಿಯಿಂದಲೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಸಾಧನೆ ಮಾಡಲಾಗಿದೆ ಎಂದು ಸರ್.ಎಂ.ವಿ ಅವರನ್ನು ಪ್ರದಾನಿ ಮೋದಿ ಸ್ಮರಿಸಿದ್ದಾರೆ.

RELATED ARTICLES

Related Articles

TRENDING ARTICLES