Thursday, December 19, 2024

ವರುಣಾದಿಂದ ಸಿದ್ದರಾಮಯ್ಯ ಕಣಕ್ಕೆ ; 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಬಾರಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ.

ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಬಹು ಕುತೂಹಲ ಮೂಡಿಸಿದ್ದ ಸಿದ್ದರಾಮಯ್ಯ ಕ್ಷೇತ್ರ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ಫೈನಲ್ ಆಗಿದೆ.

ಡಿ.ಕೆ ಶಿವಕುಮಾರ್​ ಕನಕಪುರ, ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ, ಶಾಮನೂರು ಶಿವಶಂಕ್ರಪ್ಪನವರು  ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಂ. ಬಿ ಪಾಟೀಲ್​ ಅವರಿಗೆ ಬಬಲೇಶ್ವರ ಟಿಕೆಟ್ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

  • ಸಿದ್ದರಾಮಯ್ಯ, ವರುಣಾ
  • ಡಿ.ಕೆ.ಶಿವಕುಮಾರ್‌, ಕನಕಪುರ
  • ಹೆಚ್‌.ಸಿ.ಮಹದೇವಪ್ಪ, ಟಿ.ನರಸೀಪುರ
  • ಕೆ.ಹೆಚ್‌.ಮುನಿಯಪ್ಪ, ದೇವನಹಳ್ಳಿ
  • ಜಮೀರ್‌ ಅಹ್ಮದ್‌ ಖಾನ್‌, ಚಾಮರಾಜಪೇಟೆ
  • ತನ್ವೀರ್‌ ಸೇಠ್‌, ನರಸಿಂಹರಾಜಪುರ
  • ಪ್ರಿಯಾಂಕ್‌ ಖರ್ಗೆ, ಚಿತ್ತಾಪುರ
  • ಎನ್​​​.ಎಸ್​. ಹ್ಯಾರೀಸ್‌, ಶಾಂತಿನಗರ
  • ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮಾಂತರ
  • ಅಂಜಲಿ ಲಿಂಬಾಳ್ಕರ್‌, ಖಾನಾಪುರ
  • ಎ.ಬಿ.ಪಾಟೀಲ್‌, ಹುಕ್ಕೇರಿ
  • ದರ್ಶನ್‌ ಧ್ರುವನಾರಾಯಣ್​​, ನಂಜನಗೂಡು
  • ಕುಸುಮಾ, ರಾಜರಾಜೇಶ್ವರಿ ನಗರ
  • ಚಲುವನಾರಾಯಣಸ್ವಾಮಿ, ನಾಗಮಂಗಲ
  • ಶರತ್‌ ಬಚ್ಚೇಗೌಡ, ಹೊಸಕೋಟೆ
  • ಹೆಚ್‌.ಸಿ.ಬಾಲಕೃಷ್ಣ, ಮಾಗಡಿ
  • ಶರಣಪ್ರಕಾಶ್‌ ಪಾಟೀಲ್‌, ಸೇಡಂ
  • ಇಕ್ಬಾಲ್‌ ಹುಸೇನ್‌, ರಾಮನಗರ
  • ಪುಟ್ಟಣ್ಣ, ರಾಜಾಜಿನಗರ
  • ಗಣೇಶ್‌ ಹುಕ್ಕೇರಿ, ಚಿಕ್ಕೋಡಿ
  • ಸತೀಶ್‌ ಜಾರಕಿಹೊಳಿ, ಯಮಕನಮರಡಿ
  • ಮಧು ಬಂಗಾರಪ್ಪ, ಸೊರಬ
  • ಡಾ.ಹೆಚ್‌.ಡಿ.ರಂಗನಾಥ್‌, ಕುಣಿಗಲ್‌
  • ಟಿ.ಬಿ.ಜಯಚಂದ್ರ, ಶಿರಾ
  • ವಿಜಯಾನಂದ ಕಾಶೆಪ್ಪನವರ್‌, ಹುನಗುಂದ
  • ಅಶೋಕ್‌ ಖೇಣಿ, ಬೀದರ್‌ ದಕ್ಷಿಣ
  • ಶಿವಾನಂದ ಪಾಟೀಲ್‌, ಬಸವನಬಾಗೇವಾಡಿ
  • ಅಜಯ್‌ ಸಿಂಗ್‌, ಜೇವರ್ಗಿ
  • ಸೌಮ್ಯಾ ರೆಡ್ಡಿ, ಜಯನಗರ
  • ರಾಮಲಿಂಗಾ ರೆಡ್ಡಿ, ಬಿಟಿಎಂ ಲೇಔಟ್​​

RELATED ARTICLES

Related Articles

TRENDING ARTICLES