ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಆರು ಶಾಸಕರ ಟಿಕೆಟ್ ಹೋಲ್ಡ್ ಮಾಡಿದೆ.
ಹೌದು, ಕಾಂಗ್ರೆಸ್ ಈ ಬಾರಿ ಒಟ್ಟು 66 ಹಾಲಿ ಶಾಸಕರ ಪೈಕಿ ಪ್ರಸ್ತುತ 6 ಮಂದಿಯ ಟಿಕೆಟ್ ಅನ್ನು ತಡೆಹಿಡಿದಿದೆ. ಎರಡನೇ ಪಟ್ಟಿಯಲ್ಲಿ ಟಿಕೆಟ್ ಸಿಗುತ್ತಾ? ಸಿಗಲ್ವಾ? ಎಂಬ ಲೆಕ್ಕಾಚಾರದಲ್ಲಿದ್ದಾರೆ ಹಾಲಿ ಕೈ ಶಾಸಕರು.
ಪುಲಿಕೇಶಿನಗರ ಕ್ಷೇತ್ರದ ಅಖಂಡ ಶ್ರೀನಿವಾಸಮೂರ್ತಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವಿ.ಮುನಿಯಪ್ಪ, ಕುಂದಗೋಳ ಕ್ಷೇತ್ರದ ಕುಸುಮಾ ಶಿವಳ್ಳಿ, ಲಿಂಗಸುಗೂರು ಕ್ಷೇತ್ರದ ಡಿ.ಎಸ್ ಹುಲಗೇರಿ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ.
ರಾಣಿಬೆನ್ನೂರು ಕ್ಷೇತ್ರದಲ್ಲಿ ಕೆ.ಬಿ ಕೋಳಿವಾಡ ಬದಲಿಗೆ ಪುತ್ರ ಪ್ರಕಾಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನೂ ಪಾವಗಡ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ತಾನು ಸ್ಪರ್ಧಿಸಲ್ಲ, ತಮ್ಮ ಪುತ್ರನಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದರು.
95% ಹಾಲಿ ಶಾಸಕರಿಗೆ ಟಿಕೆಟ್
ಹೆಚ್ಚು ಕಡಿಮೆ 90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೆ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂಧಾನಗಳು ಹಾಗೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಸರಿ ಆಗುತ್ತದೆ ಎಂದು ಹೇಳಿದ್ದಾರೆ.