ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸುವುದು ಖಚಿತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಕೇಳಿದ್ರೆ ಆ ಕ್ಷೇತ್ರದಿಂದಲೇ ಟಿಕೆಟ್ ಕೊಡುತ್ತಿದ್ದೆವು ಎಂದಿದ್ದಾರೆ.
ಸಿದ್ದರಾಮಯ್ಯ ವರುಣಾ ಬೇಕು ಅಂದ್ರು, ಅದಕ್ಕೆ ಅದನ್ನೇ ಕೊಟ್ಟಿದ್ದೀವಿ. ಒಂದು ವೇಳೆ ಕೋಲಾರ ಬೇಕು ಅಂತಾ ಹೇಳಿದ್ರೆ ಅದನ್ನೇ ಕೊಡ್ತಿದ್ದೆವು’ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಯಾವುದೇ ರೀತಿಯ ಬಂಡಾಯವಿಲ್ಲ
ಸಿದ್ದರಾಮಯ್ಯನವರ ಇಚ್ಛೆಯಂತೆ ಅವರಿಗೆ ಕ್ಷೇತ್ರ ನೀಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಂಡಾಯವಿಲ್ಲ. ಒಂದುವೇಳೆ ಭಿನ್ನಾಭಿಪ್ರಾಯಗಳಿದ್ದರೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಡಿಕೆಶಿ ಹೇಳಿದ್ದಾರೆ.
ಯತೀಂದ್ರ ಇದೀಗ ಅತಂತ್ರ
ಮೊದಲ ಪಟ್ಟಿಯಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಸೇರಿದಂತೆ ಘಟಾನುಘಟಿಗಳಿಗೆ ಟಿಕೆಟ್ ಅಂತಿಮವಾಗಿದೆ. ಆದರೆ, ಸಿದ್ದರಾಮಯ್ಯಗೆ ವರುಣಾ ಟಿಕೆಟ್ ನೀಡಿದ್ದು, ಪುತ್ರ ಯತೀಂದ್ರ ಇದೀಗ ಅತಂತ್ರರಾಗಿದ್ದಾರೆ.