ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 4ನೇ ಬೇಟೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಒಂದೂವರೆ ಲಕ್ಷ ರೂಪಾಯಿ ಡೀಲ್ ಕುದುರಿಸಿದ್ದು, 1 ಲಕ್ಷ ಲಂಚವನ್ನು ಸೈಲೆಂಟ್ ಆಗಿಯೇ ಜೇಬಿಗಿಳಿಸಿದ್ದಾರೆ.
ಹೌದು, ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ನಾಲ್ಕನೇ ಶಾಸಕ. ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್ ಮಾತುಕತೆ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಲಂಚಾವತಾರ ಬಯಲಾಗಿದೆ.
ಶಾಸಕನ ಭ್ರಷ್ಟಾಚಾರ ಪವರ್ ಟಿವಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಳ್ಳಕೆರೆಯಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಶಾಸಕ ಡೀಲ್ಗೆ ಕೈ ಹೊಡ್ಡಿದ್ದಾರೆ. ಪವರ್ ಟಿವಿ ಪ್ರತಿನಿಧಿ ಜೊತೆ ಚಳ್ಳಕೆರೆ ಪಟ್ಟಣದಲ್ಲಿರುವ ಹೋಟೆಲೊಂದರಲ್ಲಿ ಮೆಗಾ ಡೀಲ್ ನಡೆದಿದೆ.
ಅನಧಿಕೃತ ಕೇಬಲ್ ಅಳವಡಿಕೆಗೆ ಕಿಲೋಮೀಟರ್ಗೆ ಒಂದೂವರೆ ಲಕ್ಷ ರೂ. ಲಂಚದ ಮಾತುಕತೆ ನಡೆದಿದೆ. ಅಡ್ವಾನ್ಸ್ ಆಗಿ 1 ಲಕ್ಷ ರೂಪಾಯಿ ಲಂಚ ಪಡೆಯಲು ಶಾಸಕ ಟಿ.ರಘುಮೂರ್ತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಘುಮೂರ್ತಿ
ಪಕ್ಷ: ಕಾಂಗ್ರೆಸ್
ವಯಸ್ಸು : 59 ವರ್ಷ
ಕ್ಷೇತ್ರ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ
ಜಿಲ್ಲೆ: ಚಿತ್ರದುರ್ಗ
ಪ್ರಮುಖ ಅಂಶಗಳು:
- ಎರಡು ಬಾರಿ ಶಾಸಕರಾಗಿ ಆಯ್ಕೆ
* ತುರುವನೂರು ಪ್ರಥಮ ದರ್ಜೆ ಕಾಲೇಜಿನ ಸ್ಥಳಾಂತರ ವಿರೋಧಿಸಿ ಪಾದಯಾತ್ರೆ
* ತಹಶೀಲ್ದಾರ್ ರಘುಮೂರ್ತಿ ಜೊತೆ ಜಟಾಪಟಿ
* ಒಟ್ಟು ಆಸ್ತಿ : 6.37 ಕೋಟಿ