Wednesday, January 22, 2025

ಪವರ್ ಟಿವಿ 10ನೇ ಬೇಟೆ : 3 ಕಿ.ಮೀ.ಗೆ 3 ಲಕ್ಷ ಕಮಾಯ್ ಮಾಡಿದ ಶಾಸಕ ಪುಟ್ಟರಂಗ ಶೆಟ್ರು

ಬೆಂಗಳೂರು : ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಅವರ ಭ್ರಷ್ಟಾಚಾ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಟಾ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 10ನೇ ಶಾಸಕ ಇವರೇ.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 3 ಕಿಲೋಮೀಟರ್​​​​ಗೆ 3 ಲಕ್ಷ ರೂಪಾಯಿ ಲಂಚ ನೀಡುವಂತೆ ಶಾಸಕ ಪುಟ್ಟರಂಗ ಶೆಟ್ಟಿ ಪವರ್ ಟಿವಿ ಪ್ರತಿನಿಧಿ ಜೊತೆಗೆ ಡೀಲ್ ಕುದುರಿಸಿದ್ದಾರೆ.

ಚಾಮರಾಜನಗರದ ಅತಿಥಿಗೃಹದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್ ನಡೆದಿದೆ. ಕೇಬಲ್ ಅಳವಡಿಕೆಗೆ ಪ್ರತೀ ಕಿಲೋಮೀಟರ್​ಗೆ 1 ಲಕ್ಷ ರೂಪಾಯಿ ಹಣ ನೀಡುವಂತೆ ಪುಟ್ಟರಂಗ ಶೆಟ್ಟಿ ಅವರು ಭೇಡಿಕೆ ಇಟ್ಟಿದ್ದರು.

ಒಟ್ಟು 3 ಕಿಲೋಮೀಟರ್​​ಗೆ 3 ಲಕ್ಷ ರೂಪಾಯಿ ನೀಡುವಂತೆ ಶಾಸಕರು ಫೈನಲ್ ನಿರ್ಧಾರ ಮಾಡಿದ್ದರು. ಅದರಂತೆ, ಅಡ್ವಾನ್ಸ್ ಆಗಿ ಸಹಾಯಕನಿಂದ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಪುಟ್ಟರಂಗ ಶೆಟ್ಟಿ ಪವರ್ ಟಿವಿ ರಹಸ್ಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

10 ಲಂಚಬಾಕರ ಲಂಚಾವತಾರ

ಒಟ್ಟಾರೆ, 10 ಶಾಸಕರು ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪವರ್ ಟಿವಿ ಪ್ರತಿನಿಧಿ ಜೊತೆಗೆ ಮೆಗಾ ಡೀಲ್ ನಡೆಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಪವರ್ ಟಿನಿ ಇನ್ನೂ ಅನೇಕ ದೊಡ್ಡ ಕುಳಗಳ ಲಂಚಾವತಾರವನ್ನು ರಾಜ್ಯದ ಜನತೆಯ ಮುಂದೆ ಬಯಲು ಮಾಡಲಿದೆ.

 

ಪುಟ್ಟರಂಗ ಶೆಟ್ಟಿ

ಪಕ್ಷ: ಕಾಂಗ್ರೆಸ್

ವಯಸ್ಸು  : 64 ವರ್ಷ

ಕ್ಷೇತ್ರ: ಚಾಮರಾಜನಗರ ವಿಧಾನಸಭಾ ಕ್ಷೇತ್ರ

ಜಿಲ್ಲೆ: ಚಾಮರಾಜನಗರ

ಒಟ್ಟು ಆಸ್ತಿ : 3.39 ಕೋಟಿ

ಡೀಲ್ ನಡೆದ ಸ್ಥಳ: ಅತಿಥಿಗೃಹ, ಚಾಮರಾಜನಗರ

 

ಪ್ರಮುಖ ಅಂಶಗಳು:

  • ಮೂರು ಬಾರಿ ಶಾಸಕರಾಗಿ ಆಯ್ಕೆ
  • 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವ
  • ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹೊಣೆ
  • ಗುಜರಾತ್ ಮೂಲದ ವ್ಯಕ್ತಿಗೆ 9 ಕೋಟಿ ರೂ. ದೋಖಾ ಆರೋಪ
  • ವಿಧಾನಸೌಧದ ಕಚೇರಿಯಲ್ಲಿ 25 ಲಕ್ಷ ಹಣ ಪತ್ತೆ ಪ್ರಕರಣ

RELATED ARTICLES

Related Articles

TRENDING ARTICLES