Thursday, December 19, 2024

ಪವರ್ ಟಿವಿ ಮೊದಲ ಬೇಟೆ : ಬರೋಬ್ಬರಿ 2 ಲಕ್ಷಕ್ಕೆ ಡೀಲ್ ಕುದುರಿಸಿ ಬಲೆಗೆ ಬಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್

ಬೆಂಗಳೂರು : ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ಹಿಟ್ನಾಳ್ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊದಲ ಬೇಟೆ. ಕೊಪ್ಪಳದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 2 ಲಕ್ಷ ರೂಪಾಯಿ ಡೀಲ್​ ಕುದುರಿಸಿದ್ದಾರೆ.

ಹೌದು, ಕೊಪ್ಪಳದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಅನುಮತಿ ಇಲ್ಲದೆ ಕೇಬಲ್ ಅಳವಡಿಕೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಡೀಲ್ ಮಾಡಿಕೊಂಡಿಡಿದ್ದಾರೆ.

ಬೆಂಗಳೂರಿನ ಶಾಸಕರ ಭವನ ಶಾಸಕರ ಕೊಠಡಿಯಲ್ಲಿ ಡೀಲ್ ಮಾತುಕತೆ ನಡೆದಿದ್ದು, ಕಿಲೋಮೀಟರ್​​ಗೆ ಶಾಸಕ ರಾಘವೇಂದ್ರ ಹಿಟ್ಳಾಳ್​​ 4 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ.

ಅಂತಿಮವಾಗಿ ಕಿಲೋಮೀಟರ್​ಗೆ 2 ಲಕ್ಷ ರೂಪಾಯಿ ಡೀಲ್​ಗೆ ಒಪ್ಪಿಗೆ ಮಾಡಿಕೊಂಡಿದ್ದು, ಡೀಲ್ ಭಾಗವಾಗಿ 2 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ. ಅಲ್ಲದೆ,  ಶಾಸಕ ರಾಘವೇಂದ್ರ ಹಿಟ್ಳಾಳ್ ಅಡ್ವಾನ್ಸ್ ಆಗಿ 2 ಲಕ್ಷ ರೂಪಾಯಿ ಪಡೆಯುವ ದೃಶ್ಯ ‘ಪವರ್ ಟಿವಿ’ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಘವೇಂದ್ರ ಹಿಟ್ನಾಳ್

ಪಕ್ಷ: ಕಾಂಗ್ರೆಸ್

ವಯಸ್ಸು : 43 ವರ್ಷ

ಕ್ಷೇತ್ರ: ಕೊಪ್ಪಳ ವಿಧಾನಸಭಾ ಕ್ಷೇತ್ರ

ಜಿಲ್ಲೆ: ಕೊಪ್ಪಳ

ಪ್ರಮುಖ ಅಂಶಗಳು:

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

ಬಿಜೆಪಿ ಸರ್ಕಾರ ಬಂದಾಗಿನಿಂದ 40% ಕಮಿಷನ್ ಹಣ ಸಂಗ್ರಹ ಎಂದು ಆರೋಪ

ಒಟ್ಟು ಆಸ್ತಿ – 3.28 ಕೋಟಿ

RELATED ARTICLES

Related Articles

TRENDING ARTICLES