Sunday, January 19, 2025

ಪವರ್ ಟಿವಿ 3ನೇ ಬೇಟೆ : ಬರೋಬ್ಬರಿ 15 ಲಕ್ಷ ಡಿಮ್ಯಾಂಡ್ ಇಟ್ಟ ಶಾಸಕ ಹೆಚ್.ನಾಗೇಶ್

ಬೆಂಗಳೂರು : ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ನಾಗೇಶ್ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 3ನೇ ಬೇಟೆ. ಮುಳಬಾಗಿಲು ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಫೈನಲ್ ಆಗಿ 11 ಲಕ್ಷ ರೂಪಾಯಿಗೆ ಲಂಚದ ಮಂಚ ಏರಿದ್ದಾರೆ.

ಹೌದು, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್​​​​​ ಮಾತುಕತೆ ವೇಳೆ ಮುಳಬಾಗಿಲು ಶಾಸಕ ಹೆಚ್.ನಾಗೇಶ್ ಲಂಚಾವತಾರದ ಕರಾಳ ಮುಖ ಬಟಾ ಬಯಲಾಗಿದೆ. ಶಾಸಕನ ಭ್ರಷ್ಟಾಚಾರ ಪವರ್ ಟಿವಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಳಬಾಗಿಲಿನಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮುಳಬಾಗಿಲು ಶಾಸಕ ಹೆಚ್.ನಾಗೇಶ್ ಪವರ್ ಟಿವಿ ಪ್ರತಿನಿಧಿ ಜೊತೆಗೆ ಲಂಚದ ಮಾತುಕತೆ ನಡೆಸಿ, ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ವೈಟ್​​ಫೀಲ್ಡ್​​​ನಲ್ಲಿರುವ ಅಪಾರ್ಟ್​ಮೆಂಟ್​​​ ವೊಂದರಲ್ಲಿ ಶಾಸಕರ ಡೀಲ್ ನಡೆದಿದೆ.

ಓಎಫ್​ಸಿ ಕೇಬಲ್ ಅಳವಡಿಕೆಗೆ ಪರ್ಮಿಶನ್ ನೀಡಲು ಕಿಲೋಮೀಟರ್​ಗೆ ಒಂದೂವರೆ ಲಕ್ಷ ಡಿಮ್ಯಾಂಡ್ ಒಟ್ಟು 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಶಾಸಕ ಹೆಚ್​.ನಾಗೇಶ್, ಫೈನಲ್​​​​​ ಡೀಲ್ ಆಗಿ 11 ಲಕ್ಷ ರೂಪಾಯಿಗೆ ಒಪ್ಪಿಗೆ ನೀಡಿದ್ದಾರೆ. ಫೈನಲ್ ಆಗಿ  2 ಲಕ್ಷ ರೂಪಾಯಿ ಅಡ್ವಾನ್ಸ್ ಆಗಿ ಪಡೆದುಕೊಳ್ಳುವಾಗ ಪವರ್ ಟಿವಿಗೆ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ.

 

ಹೆಚ್.ನಾಗೇಶ್

ಪಕ್ಷ: ಕಾಂಗ್ರೆಸ್

ವಯಸ್ಸು : 64 ವರ್ಷ

ಕ್ಷೇತ್ರ: ಮುಳಬಾಗಿಲು ವಿಧಾನಸಭಾ ಕ್ಷೇತ್ರ

ಜಿಲ್ಲೆ: ಕೋಲಾರ

 

ಪ್ರಮುಖ ಅಂಶಗಳು:

ಪಕ್ಷೇತರ ಶಾಸಕರಾಗಿ ಆಯ್ಕೆ

ಬಿಜೆಪಿಗೆ ಬೆಂಬಲ ನೀಡಿ ಅಬಕಾರಿ ಸಚಿವರಾಗಿ ಸೇವೆ

ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ

ಒಟ್ಟು ಆಸ್ತಿ : 11.9 ಕೋಟಿ

RELATED ARTICLES

Related Articles

TRENDING ARTICLES