ಬೆಂಗಳೂರು : ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಲಂಚಾವತಾರ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಟಾ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 8ನೇ ಶಾಸಕ ಡಿ.ಎಸ್ ಹೂಲಗೇರಿ.
ಹೌದು, ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ 3 ಕಿಲೋಮೀಟರ್ಗೆ 3 ಲಕ್ಷ ರೂಪಾಯಿ ಲಂಚಕ್ಕೆ ಫೈನಲ್ ಆಗಿ ಶಾಸಕ ಬಸನಗೌಡ ದದ್ದಲ್ ಡೀಲ್ ಕುದುರಿಸಿದ್ದಾರೆ.
ಲಿಂಗಸುಗೂರಿನಲ್ಲಿ ಓಎಫ್ಸಿ ಕೇಬಲ್ ಅಳವಡಿಕೆಗೆ ಶಾಸಕರು ಪವರ್ ಟಿವಿ ಪ್ರತಿನಿಧಿಯೊಂದಿಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಡೀಲ್ ಕುದುರಿಸಿದ್ದಾರೆ. 13 ಕಿಲೋಮೀಟರ್ನಲ್ಲಿ ಬಾಕಿ ಇರುವ 3 ಕಿ.ಮೀ. ಅಳವಡಿಕೆಗೆ ಡೀಲ್ ಮಾತುಕತೆ ನಡೆಸಿದ್ದಾರೆ.
ಪ್ರತೀ ಕಿಲೋಮೀಟರ್ಗೆ 1 ಲಕ್ಷದಂತೆ 3 ಲಕ್ಷ ನೀಡುವಂತೆ ಶಾಸಕ ಡಿ.ಎಸ್.ಹೂಲಗೇರಿ ಡಿಮ್ಯಾಂಡ್ಮಾಡಿದ್ದಾರೆ. ಅಡ್ವಾನ್ಸ್ ಆಗಿ ಸಹಾಯಕನ ಮೂಲಕ 1 ಲಕ್ಷ ರೂಪಾಯಿ ತನ್ನ ಜೇಬಿಗೆ ಇಳಿಸಿದ್ದಾರೆ.
ಡಿ.ಎಸ್.ಹೂಲಗೇರಿ
ಪಕ್ಷ: ಕಾಂಗ್ರೆಸ್
ಜಿಲ್ಲೆ: ರಾಯಚೂರು
ವಯಸ್ಸು : 61 ವರ್ಷ
ಕ್ಷೇತ್ರ: ಲಿಂಗಸುಗೂರು ವಿಧಾನಸಭಾ ಕ್ಷೇತ್ರ
ಜಿಲ್ಲೆ: ರಾಯಚೂರು
ಸ್ಥಳ: ಶಾಸಕರ ಭವನ, ಬೆಂಗಳೂರು
ಪ್ರಮುಖ ಅಂಶಗಳು:
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
ನೀರು ಬಂದಿಲ್ಲಂದ್ರೆ ಪುರಸಭೆ ಅಧ್ಯಕ್ಷಗೆ ಹೊಡೀರಿ ಎಂದಿದ್ದರು
ನೀರಿನ ಬಗ್ಗೆ ಫೋನ್ ಮಾಡಿದವರಿಗೆ ಶಾಸಕರ ಉಪದೇಶ
ಒಟ್ಟು ಆಸ್ತಿ : 10.75 ಕೋಟಿ