Monday, December 23, 2024

ಪವರ್ ಬೇಟೆ ನಂ.6 : 2 ಲಕ್ಷಕ್ಕೆ ಬೇಡಿಕೆಯಿಟ್ಟು 1ಲಕ್ಷಕ್ಕೆ ಡೀಲ್ ಕುದುರಿಸಿದ ಶಾಸಕ ಅಮರೇಗೌಡ ಪಾಟೀಲ್

ಬೆಂಗಳೂರು : ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರನೇ ಶಾಸಕ.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 2 ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದು, ಫೈನಲ್ ಆಗಿ 2 ಲಕ್ಷ ರೂಪಾಯಿಗೆ ಡೀಲ್ ಕುದುರಿಸಿದ್ದಾರೆ.

ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್​​​​​ ಮಾತುಕತೆ ವೇಳೆ ಬಿಡಿಗಾಸಿಗೆ ಕೈ ಚಾಚಿರುವುದು ರಾಜ್ಯದ ಜನತೆ ಮುಂದೆ ಬಯಲಾಗಿದೆ. ಕುಷ್ಟಗಿಯಲ್ಲಿ ಓಎಫ್​​ಸಿ ಕೇಬಲ್​​ ಅಳವಡಿಕೆ ಸಂಬಂಧ ಶಾಸಕ ಡೀಲ್​ ಮಾಡಿಕೊಂಡಿದ್ದಾರೆ.

ಪ್ರತೀ ಕಿಲೋಮೀಟರ್​ ಕೇಬಲ್ ಅಳವಡಿಕೆಗೆ ಶಾಸಕ ಬಯ್ಯಾಪುರ 2 ಲಕ್ಷ ರೂಪಾಯಿ ನೀಡುವಂತೆ ಶಾಸಕರ ಭವನದಲ್ಲಿ ಡಿಮ್ಯಾಂಡ್ ಮಾಡಿದ್ದಾರೆ. ಚೌಕಾಶಿ ನಂತರ ಪ್ರತೀ ಕಿಲೋಮೀಟರ್​ಗೆ 1 ಲಕ್ಷ ರೂಪಾಯಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅಡ್ವಾನ್ಸ್ ಆಗಿ ಸಹಾಯಕನ ಮೂಲಕ 1 ಲಕ್ಷ ರೂಪಾಯಿ ಪಡೆಯುವಾಗ ಶಾಸಕ ಅಮರೇಗೌಡ ಪಾಟೀಲ್ ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

 

ಅಮರೇಗೌಡ ಪಾಟೀಲ್ ಬಯ್ಯಾಪುರ

ಪಕ್ಷ: ಕಾಂಗ್ರೆಸ್

ವಯಸ್ಸು : 68 ವರ್ಷ

ಕ್ಷೇತ್ರ: ಕುಷ್ಟಗಿ ವಿಧಾನಸಭಾ ಕ್ಷೇತ್ರ

ಜಿಲ್ಲೆ: ಬಳ್ಳಾರಿ

ಐದು ಬಾರಿ ಶಾಸಕರಾಗಿ ಆಯ್ಕೆ

ಒಟ್ಟು ಆಸ್ತಿ : 1.55 ಕೋಟಿ

RELATED ARTICLES

Related Articles

TRENDING ARTICLES