Sunday, January 19, 2025

ಪವರ್ ಬೇಟೆ ನಂ.7 : 3 ಲಕ್ಷಕ್ಕೆ ‘ಲಂಚ’ದ ‘ಮಂಚ’ ಏರಿದ ಶಾಸಕ ಬಸನಗೌಡ ದದ್ದಲ್

ಬೆಂಗಳೂರು : ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಲಂಚಾವತಾರ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಟಾ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7ನೇ ಶಾಸಕ ಬಸನಗೌಡ ದದ್ದಲ್.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 3 ಕಿಲೋಮೀಟರ್​​​​ಗೆ 3 ಲಕ್ಷ ರೂಪಾಯಿ ಲಂಚಕ್ಕೆ ಫೈನಲ್ ಡೀಲ್​ ಶಾಸಕ ಬಸನಗೌಡ ದದ್ದಲ್ ಡೀಲ್ ಕುದುರಿಸಿದ್ದಾರೆ.

ವಿಪರ್ಯಾಸ ಎಂದರೆ ಓಎಫ್​ಸಿ ಕೇಬಲ್​​ ಅಳವಡಿಕೆ ಬಗ್ಗೆ ರಾಯಚೂರು ಗ್ರಾಮೀಣ ಶಾಸಕರಿಗೆ ಅರಿವೇ ಇಲ್ಲ. ಅರಿವಿಲ್ಲದಿದ್ರೂ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್​​​​​ ಮಾತುಕತೆ ವೇಳೆ ಪವರ್ ಟಿವಿ ಕ್ಯಾಮೆರಾಗೆ ಆಹಾರವಾಗಿದ್ದಾರೆ. ಓಎಫ್​ಸಿ ಕೇಬಲ್ ಅಳವಡಿಕೆಗೆ ಪ್ರತೀ ಕಿಲೋಮೀಟರ್​ಗೆ 1 ಲಕ್ಷ ರೂ. ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಪವರ್ ಟಿವಿ ಪ್ರತಿನಿಧಿಯೊಂದಿಗೆ ಡೀಲ್ ಮಾತಕತೆ ನಡೆದಿದ್ದು, 3 ಕಿಲೋಮೀಟರ್​​​​ಗೆ 3 ಲಕ್ಷ ರೂಪಾಯಿ ಲಂಚಕ್ಕೆ ಫೈನಲ್ ಡೀಲ್ ಕುದುರಿಸಿದ್ದಾರೆ. ಅಡ್ವಾನ್ಸ್ ಆಗಿ ಸಹಾಯಕನ ಮೂಲಕ 1 ಲಕ್ಷ ರೂಪಾಯಿ ಪಡೆದಿದ್ದಾರೆ.

 

ಬಸನಗೌಡ ದದ್ದಲ್

ಪಕ್ಷ: ಕಾಂಗ್ರೆಸ್

ವಯಸ್ಸು : 50 ವರ್ಷ

ಕ್ಷೇತ್ರ: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ

ಜಿಲ್ಲೆ: ರಾಯಚೂರು

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

ಒಟ್ಟು ಆಸ್ತಿ : 2.46 ಕೋಟಿ

RELATED ARTICLES

Related Articles

TRENDING ARTICLES