Thursday, January 23, 2025

‘ಪವರ್’ ಟಿವಿ ಮೆಗಾ ಬೇಟೆಗೆ ರಾಜ್ಯದ ಜನರಿಂದ ‘ಬಹುಪರಾಕ್’ : ಕಾಂಗ್ರೆಸ್, ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?

ಬೆಂಗಳೂರು : ಪವರ್ ಟಿವಿ ಸ್ಟಿಂಗ್ ಆಪರೇಶನಲ್ ಗೆ ಇಡೀ ಸರ್ಕಾರ ಮಾತ್ರವಲ್ಲದೆ ವಿಪಕ್ಷ ನಾಯಕರೆಲ್ಲಾ ಶೇಕ್ ಆಗಿದ್ದಾರೆ. ಪವರ್ ಟಿವಿ ಮಾಧ್ಯಮ ಇತಿಹಾಸದಲ್ಲೇ ನಡೆಸಿದ ಅತಿದೊಡ್ಡ ಸ್ಟಿಂಗ್​ ಆಪರೇಷನ್​ಗೆ ರಾಜ್ಯದ ಜನತೆ ಶಹಬ್ಬಾಸ್​ಗಿರಿ ಹೇಳಿದ್ದಾರೆ.

ಹೌದು, ಮಾಧ್ಯಮ ಇತಿಹಾಸದಲ್ಲೇ ಪವರ್ ಟಿವಿ 10 ಶಾಸಕರ ಭ್ರಷ್ಟಾಚಾರ ಮುಖವಾಡ ಕಳಚಿದೆ. ಓಎಫ್ ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಮೆಗಾ ಡೀಲ್​ ಬಟಾ ಬಯಲು ಮಾಡಿದೆ. ರಾಜ್ಯದಲ್ಲಿ ಪವರ್​​ ಟಿವಿ ಕುಟುಕು ಕಾರ್ಯಾಚರಣೆ ಸಂಚಲನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ‘ಪವರ್’ ಫುಲ್​ ಕಾರ್ಯಾಚರಣೆಗೆ ಶುಭಾಶಯಗಳ ಮಹಾಪೂರ​ ಹರಿದು ಬಂದಿದೆ.

ಪವರ್ ಟಿವಿ ಸೆನ್ಸೇಶನಲ್ ಸ್ಟಿಂಗ್ ಆಪರೇಶನ್ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಒಂದು ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡಲು ಯತ್ನಿಸ್ತಾರೆ‌. ಸ್ಟಿಂಗ್ ಆಪರೇಶನ್ ಬಗ್ಗೆ ಎಲ್ಲಾ ಮಾಹಿತಿ ಪಡೆದುಕೊಳ್ತೀವಿ ಎಂದು ಹೇಳಿದ್ದಾರೆ.

ತನಿಖೆಗೆ ಆಗ್ರಹಿಸುತ್ತೇವೆ ಎಂದ ನಿರಾಣಿ

ಸಚಿವ ಮುರುಗೇಶ್ ಆರ್. ನಿರಾಣಿ ಈ ಬಗ್ಗೆ ಪವರ್ ಟಿವಿ ಜೊತೆಗೆ ಮಾತನಾಡಿದ್ದು, ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಬೇಕು. ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದರು. ಈಗ ಅವರೇ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಾನು ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಏನಾಗಿದೆ ಅಂತಾ ತಿಳಿದು ತನಿಖೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ನಾನು ಹೆಚ್ಚಿಗೆ ನೋಡಿಲ್ಲ ಎಂದ ಆನಂದ್ ಸಿಂಗ್

ಪವರ್ ಸ್ಟಿಂಗ್ ಬಗ್ಗೆ ಪ್ರಭುಚೌಹನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ಈ ತರಹ ಮಾಡಬಾರದು. ಇದು ತಪ್ಪು ಎಂದ ಚೌಹಾನ್ ಹೇಳಿದ್ದಾರೆ. ಪವರ್ ಟಿವಿ ಆಪರೆಷನ್ ಗೆ ಸಚಿವರಾದ ಅನಂದ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚಿಗೆ ನೋಡಿಲ್ಲ, ನೋಡಿ ಮಾತನಾಡುವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯವರ ಕೈವಾಡ ಇದೆ

ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಅವರು, ಪವರ್ ಟಿವಿ ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಮಾಸ್ಟರ್ ಮೈಂಡ್. ಇದರ ಹಿಂದೆ ಬಿಜೆಪಿಯವರ ಕೈವಾಡ ಇದೆ. ಮಾಡಾಳ್ ವೀರುಪಾಕ್ಷಪ್ಪ ಬಗ್ಗೆ ಬಿಜೆಪಿಯವರು ಯಾಕೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಿದ್ದಾರೆ.

ಕೈ ಕೈ ಮುಗಿದ ಉಗ್ರಪ್ಪ

ಪವರ್ ಸ್ಟಿಂಗ್ ಬಗ್ಗೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ನಾನು ನೋಡ್ತಿನಿ, ಕ್ರಮ ತಗೋತೀನಿ. ನಮ್ಮ‌ ಪಕ್ಷದ ಅಧ್ಯಕ್ಣರು ತಗೋತಾರೆ ಎಂದಿದ್ದಾರೆ. ಇತ್ತ, ಮಾಜಿ ಸಂಸದ ಉಗ್ರಪ್ಪ ಶಾಸಕರ ಲಂಚದ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಕೈ ಕೈ ಮುಗಿದಿದ್ದಾರೆ. ನಾನು ಮಾತಾಡಲ್ಲ ಎನ್ನುತ್ತಲೇ ಪವರ್ ಟಿವಿಯ ಮೈಕ್ ಹಿಡಿದುಕೊಂಡು ಕೈ ಮುಗಿದಿದ್ದಾರೆ.

ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿ

ಪವರ್ ಟಿವಿ ಸ್ಟಿಂಗ್ ಆಪರೇಷನ್ಗೆ ಕಾಂಗ್ರೆಸ್ ನಾಯಕರು ಅಕ್ಷರಶಃ ಕಕ್ಕಾಬಿಕ್ಕಿಯಾಗಿದ್ದಾರೆ. ಶಾಸಕರ ಕರ್ಮಕಾಂಡ ಗೊತ್ತಾದ್ರೂ ಮಾತಾಡದೇ ಸೈಲೆಂಟ್ ಆಗದ್ದಾರೆ. ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ. ಪೂರ್ತಿ ವಿಚಾರ ತಿಳಿದುಕೊಂಡು ಮಾತಾಡ್ತೀನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಸಚಿವ ರಾಮುಲು ಬಹುಪರಾಕ್

ಸಚಿವ ಗೋಪಾಲಯ್ಯ ಅವರು ಪವರ್ ಟಿವಿ ಕಾರ್ಯಚರಣೆಯನ್ನು ಶ್ಲಾಘಿಸಿದ್ದಾರೆ. ‌ಪವರ್ ಟಿವಿ ಇದೇ ರೀತಿ ಭ್ರಷ್ಟರ ಬೇಟೆಯಾಡಲಿ. ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಇನ್ನೂ ಪವರ್ ಟಿವಿ ಮೆಗಾ ಬೇಟೆಗೆ ಸಚಿವ ಬಿ.ಶ್ರೀರಾಮುಲು ಬಹುಪರಾಕ್ ಹೇಳಿದ್ದಾರೆ. ಇದು ಇಂದಿನ‌ ಕೆಲಸವಲ್ಲ, ಹಿಂದಿನಿಂದ ಕಾಂಗ್ರೆಸ್ ಇದೇ ಕೆಲಸ ಮಾಡಿಕೊಂಡು ಬಂದಿದೆ. ಇದೀಗ ಅವರ ಲಂಚವಾತರವನ್ನು ಪವರ್ ಟಿವಿ ಮೂಲಕ ಜನ ನೋಡಲಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES