ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ 1,780 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
‘ಒನ್ ವರ್ಲ್ಡ್ ಟಿ.ಬಿ ಶೃಂಗಸಭೆ’ ಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ವಿಶ್ವ ಕ್ಷಯರೋಗ ದಿನ ಮತ್ತು ಟಿ.ಬಿ. ತಡೆ ಪಾಲುದಾರಿಕೆ ಉದ್ದೇಶದಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಒನ್ ವರ್ಲ್ಡ್ ಟಿ.ಬಿ ಶೃಂಗಸಭೆ’ ಯನ್ನು ಆಯೋಜಿಸಿದೆ.
ಟಿ.ಬಿ ಮುಕ್ತ ಪಂಚಾಯತ್ ಉಪಕ್ರಮ, ಪ್ಯಾನ್-ಇಂಡಿಯಾ ರೋಲ್‌ಔಟ್‌ನ ಕಡಿಮೆ ಟಿ.ಬಿ ಪ್ರಿವೆಂಟಿವ್ ಟ್ರೀಟ್‌ಮೆಂಟ್ ಮತ್ತು ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಭಾರತದ ವಾರ್ಷಿಕ ಟಿ.ಬಿ ವರದಿ 2023 ಅನ್ನು ಬಿಡುಗಡೆ ಮಾಡಿದ್ದಾರೆ.