ಬೆಂಗಳೂರು : ಗೊಮ್ಮಟೇಶ್ವರ ಪ್ರತಿಮೆಗಿಂತಲೂ ಅತೀ ದೊಡ್ಡ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ. 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದೇವೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ (ತೋಟಗಾರಿಕೆ ಇಲಾಖೆ) ಇಲಾಖೆಯಲ್ಲಿ ಇದ್ದಾಗ ಒಂದು ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಎಂಬುದು ನನ್ನ ಭಯಕೆ ಎಂದು ತಿಳಿಸಿದ್ದಾರೆ.
100 ಕೋಟಿ ರೂ. ಘೋಷಣೆ
ಲಾಲ್ ಬಾಗ್ 240 ಎಕರೆ ಇದೆ. ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ನಂತೆಯೇ, ಅದಕ್ಕಿಂತಲೂ ದೊಡ್ಡ ಪಾರ್ಕ್ ನಿರ್ಮಾಣ ಮಾಡುತ್ತೇವೆ. ಸಿಎಂ ಬೊಮ್ಮಾಯಿ ಅವರು 100 ಕೋಟಿ ರೂ.ಘೋಷಣೆ ಮಾಡಿದ್ದಾರೆ. ಸಾಕಷ್ಟು ತೊಡಕು ಇದ್ದರೂ ಇಂದು ಅಲ್ಲಿರುವ ಜಮೀನನ್ನು ನಮಗೆ ಹಸ್ತಾಂತರ ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ಜಮೀನು ಹಸ್ತಾಂತರ ಆಗಿದೆ. ಇದಕ್ಕೆ ಸಚಿವ ಆರ್. ಅಶೋಕ್ ಗೆ ಧನ್ಯವಾದಗಳು ಹೇಳುತ್ತೇನೆ ಎಂದಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧಕ್ಕೆ ಈ ಪಾರ್ಕ್ ತಕ್ಕಡಿ ಹಿಡಿದಂತೆ. ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ನಿರ್ಮಾಣ ಆಗುತ್ತದೆ. ಮಲೇಷಿಯಾ, ಸಿಂಗಾಪುರ್ ಕಂಪನಿಗಳು ಇದನ್ನು ಡೆವೆಲಪ್ಮೆಂಟ್ ಮಾಡಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪಿಪಿ ಮಾಡಲ್ ಕೊಡುವುದು ಬೇಡ ಎಂದು ನಿರ್ಧರಿಸಲಾಗಿದೆ. ಹೀಗಾಗಿ, ತೋಟಗಾರಿಕೆ ಇಲಾಖೆಗೆ ಇದರ ಸಂಪೂರ್ಣವಾಗಿ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.