Wednesday, January 22, 2025

NTR30 ಕಿಕ್ ಸ್ಟಾರ್ಟ್ : ಭಯವೇ ಗೊತ್ತಿರದ ಮೃಗಗಳೊಂದಿಗೆ NTR ಸೆಣೆಸಾಟ

ಬೆಂಗಳೂರು : ಇಂಡಿಯಾಗೆ ಆಸ್ಕರ್​ನ ತಂದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್​ಟಿಆರ್ ನ್ಯೂ ವೆಂಚರ್ ಅಫಿಶಿಯಲಿ ಸೆಟ್ಟೇರಿದೆ. ಸೆನ್ಸೇಷನಲ್ ಡೈರೆಕ್ಟರ್​ಗಳಾದ ರಾಜಮೌಳಿ ಕ್ಲಾಪ್ ಮಾಡಿದ್ರೆ, ಪ್ರಶಾಂತ್ ನೀಲ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಮಾಸ್ಟರ್​ಮೈಂಡ್​ಗಳ ಮಹಾಸಂಗಮಕ್ಕೆ NTR 30 ಲಾಂಚ್ ವೇದಿಕೆ ಸಾಕ್ಷಿಯಾಗಿದೆ.

ತ್ರಿಬಲ್ ಆರ್ ಚಿತ್ರದ ಬಳಿಕ ವಾಟ್ ನೆಕ್ಸ್ಟ್ ಅಂತ ಜೂನಿಯರ್ ಎನ್​ಟಿಆರ್​ನ ಕೇಳ್ತಿದ್ದವ್ರಿಗೆ ಕೊನೆಗೂ ಉತ್ತರ ಸಿಕ್ಕಿದೆ. ಅವರ ಮುಂದಿನ ನ್ಯೂ ವೆಂಚರ್ NTR 30 ಕಿಕ್​ಸ್ಟಾರ್ಟ್​ ಆಗಿದೆ. ಹೈದರಾಬಾದ್​​ನಲ್ಲಿ ಮುಹೂರ್ತ ಕಾರ್ಯಕ್ರಮ ನೆರವೇರುವ ಮೂಲಕ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ಇತ್ತೀಚೆಗಷ್ಟೇ, RRRನ ನಾಟು ನಾಟು ಸಾಂಗ್​ಗಾಗಿ ಆಸ್ಕರ್​ನ ಇಂಡಿಯಾಗೆ ತಂದ ಜೂನಿಯರ್ ಎನ್​ಟಿಆರ್, ಹಾಲಿವುಡ್​​ನಲ್ಲೆಲ್ಲಾ ಹುಬ್ಬೇರಿಸಿದ್ದಾರೆ. ಮಾರ್ವೆಲ್ ಸ್ಟುಡಿಯೋಸ್​ನ ಮೋಸ್ಟ್ ಡಿಮ್ಯಾಂಡಿಂಗ್ ಆಕ್ಟರ್ ತಾರಕ್, ಅವುಗಳನ್ನೆಲ್ಲಾ ಬಿಟ್ಟು, ಮೊದಲೇ ಕಮಿಟ್ ಆಗಿರೋ ತಮ್ಮ 30ನೇ ಸಿನಿಮಾನ ಆರಂಭ ಮಾಡಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಭಯಾನಕ ಆಕ್ಷನ್ ವೆಂಚರ್

ಈ ಹಿಂದೆ ಜನತಾ ಗ್ಯಾರೇಜ್ ಎಂಬ ಚಿತ್ರ ಮಾಡಿದ್ದ ಕೊರಟಾಲ ಶಿವ ಌಕ್ಷನ್ ಕಟ್​ನಲ್ಲಿ NTR 30 ಶುರುವಾಗ್ತಿದೆ. ಎನ್​ಟಿಆರ್ ಹಿಂದೆಂದೂ ಕಾಣಿಸಿಕೊಂಡಿರದ ರೌದ್ರಾವತಾರದಲ್ಲಿ ಕಾಣಸಿಗಲಿದ್ದಾರೆ ಎನ್ನಲಾಗಿದೆ. ಇದು ಕೋಸ್ಟಲ್ ಲ್ಯಾಂಡ್ಸ್​​ನಲ್ಲಿ ನಡೆಯೋ ಭಯಾನಕ ಌಕ್ಷನ್ ವೆಂಚರ್ ಆಗಿದ್ದು, ಸಾವಿಗೆ ಹೆದರದಂತಹ ಭಯವೇ ಗೊತ್ತಿರದ ಮೃಗಗಳೊಂದಿಗೆ ನಾಯಕನಟ ಸೆಣೆಸಾಡಲಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಅನಿರುದ್ದ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈಗಾಗ್ಲೇ ಮೋಷನ್ ಪೋಸ್ಟರ್​ನ ಮ್ಯೂಸಿಕ್ ನಿಮಗೆ ಇಷ್ಟವಾಗಿದೆ ಅಂತ ಭಾವಿಸುತ್ತೇನೆ. ನಿಮ್ಮ ವಿಷನ್​ನ ಸಾಕಾರಗೊಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಇರಲಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ಶುಭ ಹಾರೈಸಿದ ರಾಜಮೌಳಿ-ನೀಲ್

ಈ ನೂತನ ಚಿತ್ರಕ್ಕೆ ಸೆನ್ಸೇಷನಲ್ ಡೈರೆಕ್ಟರ್​ಗಳಾದ ರಾಜಮೌಳಿ ಹಾಗೂ ಪ್ರಶಾಂತ್ ನೀಲ್ ಬಂದು ಶುಭ ಹಾರೈಸಿದ್ದಾರೆ. ರಾಜಮೌಳಿ ಕ್ಲಾಪ್ ಮಾಡಿದ್ರೆ, ನೀಲ್ ಕ್ಯಾಮೆರಾ ಚಾಲನೆ ಮಾಡಿದ್ದಾರೆ. ಉಳಿದಂತೆ ಸಿನಿಮಾದ ತಾರಾಗಣದಲ್ಲಿ ಅತಿಲೋಕ ಸುಂದರಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಟಿಸುತ್ತಿದ್ದು, ನಮ್ಮ ಕನ್ನಡಿಗ ಪ್ರಕಾಶ್ ರೈ ಕೂಡ ಬಣ್ಣ ಹಚ್ಚಲಿದ್ದಾರೆ. ಭದ್ರಾವತಿ ಮೂಲದ ತೆಲುಗು ನಟ ಶ್ರೀಕಾಂತ್ ಕೂಡ ಮುಹೂರ್ತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ವಿಶೇಷ.

ಒಟ್ನಲ್ಲಿ, ಸಿನಿಮಾ ಇದೇ ಏಪ್ರಿಲ್ 20ರಿಂದ ಶೂಟಿಂಗ್ ಶುಭಾರಂಭ ಮಾಡಲಿದೆ. ಮಾಸ್​​ಪ್ರಿಯರಿಗೆ ಮಸ್ತ್ ಮನರಂಜನೆ ಪಕ್ಕಾ ಎನ್ನಲಾಗ್ತಿದೆ. ಹೇಳಿ ಕೇಳಿ ಕೊರಟಾಲ ಶಿವ ಮಾಸ್ ಸಿನಿಮಾಗಳ ಮಾಸ್ಟರ್​. ಅಲ್ಲದೆ, ಹೆಚ್ಚು ಮಾಸ್ ಫ್ಯಾನ್ಸ್ ಫಾಲೋಯಿಂಗ್ ಇರುವ ಯಂಗ್ ಟೈಗರ್​ ಅದನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES