Saturday, November 16, 2024

ಬಲಿದಾನ ದಿವಸ್ : ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಸ್ಮರಿಸಿದ ಮೋದಿ

ಬೆಂಗಳೂರು : ಇಂದು ಬಲಿದಾನ ದಿವಸ್ (ಹುತ್ಮಾತರ ದಿನ). ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನ. ಪ್ರತಿವರ್ಷ ಮಾರ್ಚ್ 23 ಅನ್ನು ಮೂವರು ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗಾಗಿ ಬಲಿದಾನ ದಿವಸ್‌ (ಹುತ್ಮಾತರ ದಿನ) ಎಂದು ಆಚರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು ಹುತಾತ್ಮರ ದಿನದಂದು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

1931 ಮಾ.23 ರಂದು ಗಲ್ಲು ಶಿಕ್ಷೆ

ಬ್ರಿಟಿಷರು 1931 ಮಾರ್ಚ್ 23 ರಂದು ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ್ದರು. ಅವರ ತ್ಯಾಗ ಮತ್ತು ಶೌರ್ಯದ ಕಥೆಯನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಸ್ಪೂರ್ತಿದಾಯಕ ಅಧ್ಯಾಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ತ್ಯಾಗವನ್ನು ಭಾರತ ಸದಾ ಸ್ಮರಿಸುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅಪ್ರತಿಮ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳು ಎಂದು ಬರೆದಿದ್ದಾರೆ.

ಅಮರ ಸೇನಾನಿಗಳು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ನೆಲದ ವೀರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅಮರ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರವರ ಬಲಿದಾನ ದಿನದಂದು, ಅವರಿಗೆ ಶತ ಶತ ನಮನಗಳು.

ಭಾರತಾಂಬೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES