Wednesday, January 22, 2025

ವೇದಿಕೆಯಲ್ಲೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಣ್ಣೀರು

ಬೆಂಗಳೂರು : ಇದೇ ಮಾರ್ಚ್ 25ರಿಂದ ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭವಾಗಲಿದೆ. 5ನೇ ಸೀಸನ್ ಇದಾಗಿದ್ದು, ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಸಾಧಕರ ಸೀಟ್ ಅಲಂಕರಿಸಲಿದ್ದಾರೆ.

ಹೌದು, ಮೊದಲ ಅತಿಥಿಯಾಗಿರುವ ರಮ್ಯಾ ಅವರ ಸಿನಿ ಜರ್ನಿ ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು, ತನ್ನ ಸಹ ನಟನ ಅಗಲಿಕೆ ನೆನೆದು ಪದ್ಮಾವತಿ ಕಣ್ಣಿರು ಹಾಕಿದ್ದಾರೆ.

ಕಾರ್ಯಕ್ರಮದ ಪ್ರೋಮೋ ಅನ್ನು ಜೀ ವಾಹಿನಿ ಬಿಡುಗಡೆ ಮಾಡಿದ್ದು, ರಮ್ಯಾ ಅವರು ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಡಾ.ರಾಜ್ ಕುಮಾರ್ ಕುಟುಂಬದೊಂದಿಗಿನ ಸಂಬಂಧವನ್ನು ಕೂಡಾ ರಮ್ಯಾ ಈ ವೇಳೆ ಮೆಲುಕು ಹಾಕಿದ್ದಾರೆ.

ಶನಿವಾರ ಮೊದಲ ಎಪಿಸೋಡ್

ವೀಕೆಂಡ್ ವಿತ್ ರಮೇಶ್ ಸೀಸನ್ – 5ರ ಮೊದಲ ಎಪಿಸೋಡ್ ಮಾ.25(ಶನಿವಾರ) ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಸದ್ಯ ರಮ್ಯಾ ಎಪಿಸೋಡ್ ಪ್ರೋಮೋ ವನ್ನು ವಾಹಿನಿ ಹಂಚಿಕೊಂಡಿದೆ. ಸೀರೆಯಲ್ಲಿ ಮಿಂಚಿರುವ ರಮ್ಯಾಗೆ ಹಲವು ಸೆಲೆಬ್ರೆಟಿಗಳು ವೇದಿಕೆಯಲ್ಲಿ ಸರ್ಪ್ರೈಸ್ ನಿಡಿದ್ದಾರೆ.

ನಟ ಶ್ರೀನಗರ ಕಿಟ್ಟಿ ರಮ್ಯಾ ಸಿನಿ ಜರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಈ ಹಿಂದೆ ಸಂಜು ಮತ್ತು ಗೀತಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ವೇದಿಕೆಯಲ್ಲಿ ರಮ್ಯಾ ಐ ಲವ್ ಯೂ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES